
ಚಿಕ್ಕಮಗಳೂರು, ಜು.5- ಸವಿತಾ ಸಮಾಜದ ಬಂಧುಗಳಿಗೆ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಚಿಕ್ಕಮಗಳೂರು ಘಟಕದ ವತಿಯಿಂದ ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಜೀವ ಸದಸ್ಯತ್ವದ ಗುರುತಿನ ಚೀಟಿಯನ್ನು ಒಕ್ಕೂಟದ ಜಿಲ್ಲಾಧ್ಯಕ್ಷ ವಿಶ್ವನಾಥ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಸಮಾಜದ ಬಂಧುಗಳಾದ ನಾವು ಸಂಘಟಿತಾರಾಗಬೇಕಾದರೆ ನಮ್ಮ ಕರ್ನಾಟಕ ರಾಜ್ಯ ಸವಿತಾ ಸಮಾಜದ ಸದಸ್ಯರಾಗುವುದು ಅತ್ಯವಶ್ಯಕವಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮಾಂತರ ಭಾಗದಲ್ಲಿರುವ ಸವಿತಾ ಸಮಾಜದ ಬಂದುಗಳನ್ನು ಗುರುತಿಸಿ ಸದಸ್ಯತ್ವ ನೀಡಲಾಗುವುದು. ಸಂಘಟನೆ ದುರ್ಬಲರಿಗೆ, ಗ್ರಾಮಾಂತರ ಭಾಗದಲ್ಲಿರುವ ನಮ್ಮ ಸಮುದಾಯದ ಬಂಧುಗಳಿಗೆ ಅತ್ಯಗತ್ಯವಾಗಿದ್ದು, ಅವರ ಏಳಿಗೆಗಾಗಿ ಶ್ರಮಿಸುವುದಾಗಿ ಹೇಳಿದರು. ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಪದಾಧಿಕಾರಿಗಳಾದ ಮಾಧವ್, ಶಿವಕುಮಾರ್, ಚಂದ್ರಶೇಖರ್, ತೇಗೂರು ವಿಜಯ್, ಶ್ರೀಧರ್, ಟೈಟಾನಿಕ್ ಮಂಜುನಾಥ್, ಕುಮಾರ್, ಕುರುವಂಗಿ ಶ್ರೀನಿವಾಸ್, ಪುರುಷೋತ್ತಮ ಮುಂತಾದವರು ಉಪಸ್ಥಿತರಿದ್ದರು.