ಸುಲಿಗೆ ಮಾಡುತ್ತಿದ್ದ ಐವರ ಬಂಧನ

 

ಬೆಂಗಳೂರು, ಜು.5- ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುವವರು ಹಾಗೂ ಕಾರು ಚಾಲನೆ ಮಾಡಿಕೊಂಡು ಹೋಗುವವರನ್ನು ಅಡ್ಡಗಟ್ಟಿ ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಮೊಬೈಲ್ ಹಾಗೂ ಹಣ ಸುಲಿಗೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಜಯನಗರ ಉಪವಿಭಾಗದ ಪೆÇಲೀಸರು ಬಂಧಿಸಿದ್ದಾರೆ.
ಒಂಭತ್ತು ಮೊಬೈಲ್ ಸುಲಿಗೆ ಪ್ರಕರಣಗಳು ಸೇರಿದಂತೆ 12 ಪ್ರಕರಣಗಳನ್ನು ಪತ್ತೆಹಚ್ಚಿ 6.30 ಲಕ್ಷ ರೂ. ಮೌಲ್ಯದ 14 ಮೊಬೈಲ್‍ಗಳು ಹಾಗೂ 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾನೂನು ಸಂಘರ್ಷಕ್ಕೆ ಒಳಗಾದ ಐದು ಮಂದಿ ಬಾಲಕರನ್ನು ವಿಚಾರಣೆ ಮಾಡಿ 2.20 ಲಕ್ಷ ರೂ. ಬೆಲೆಯ 5 ಮೊಬೈಲ್‍ಗಳು ಹಾಗೂ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದರಿಂದಾಗಿ ಸಿದ್ದಾಪುರ ಠಾಣೆಯ ಒಂದು ಪ್ರಕರಣ ಪತ್ತೆಯಾಗಿದ್ದು, ಉಳಿದ ಮಾಲುಗಳಿಗೆ ಸಂಬಂಧಿಸಿದಂತೆ ದೂರು ನೀಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಮತ್ತೊಂದು ಪ್ರಕರಣದಲ್ಲಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಅಬೂಬಕ್ಕರ್ (19) ಎಂಬಾತನನ್ನು ಬಂಧಿಸಿ 1.10 ಲಕ್ಷ ರೂ. ಬೆಲೆಯ 3 ಮೊಬೈಲ್‍ಗಳು, ಕೃತ್ಯಕ್ಕೆ ಬಳಸಿದ್ದ ಡಿಯೋ ಬೈಕ್ ವಶಪಡಿಸಿಕೊಂಡಿದ್ದು, ಈತನ ಬಂಧನದಿಂದ ಸಿದ್ದಾಪುರ ಠಾಣೆಯ ಒಂದು ಪ್ರಕರಣ ಪತ್ತೆಯಾಗಿದೆ.
ಮೊಬೈಲ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಹಮ್ಮದ್ ಹರ್ಷಿಲ್ (20) ಮತ್ತು ಶಿವ (19) ಎಂಬುವವರನ್ನು ಬಂಧಿಸಿ 15 ಲಕ್ಷ ರೂ. ಮೌಲ್ಯದ 4 ಮೊಬೈಲ್‍ಗಳು, ಸುಜುಕಿ ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ ಹೋಂಡಾ ಆ್ಯಕ್ಟೀವಾ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಇವರಿಬ್ಬರ ಬಂಧನದಿಂದ ನಾಲ್ಕು ಮೊಬೈಲ್ ಸುಲಿಗೆ ಪ್ರಕರಣ, ಒಂದು ವಾಹನ ಕಳವು ಸೇರಿ ಐದು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳಾದ ಸಯ್ಯದ್ ಮುಜಾಹಿದ್ (20) ಮತ್ತು ವಾಸಿಂ ಅಕ್ರಂ (21) ಎಂಬುವವರನ್ನು ಬಂಧಿಸಿ 1.50 ಲಕ್ಷ ರೂ. ಮೌಲ್ಯದ ಆಟೋರಿಕ್ಷಾ, ಹೋಂಡಾ ಬೈಕ್, ಎರಡು ಮೊಬೈಲ್ ಹಾಗೂ 500ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಮುನ್ನೆಚ್ಚರಿಕಾ ಕ್ರಮಗಳು: ಸಾರ್ವಜನಿಕ ಸ್ಥಳದಲ್ಲಿರುವಾಗ ನಿಮ್ಮ ಸುತ್ತಮುತ್ತ ಯಾರಿರುತ್ತಾರೆ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು. ಒಂಟಿಯಾಗಿ ಹೋಗುವಾಗ ಮೊಬೈಲ್‍ನಲ್ಲಿ ಮಾತನಾಡುವುದಾಗಲಿ, ಮೆಸೇಜ್ ಮಾಡುವುದಾಗಲಿ ಮಾಡಬಾರದು.
ಮೊಬೈಲ್‍ನಲ್ಲಿ ಮಾತನಾಡುವ ಅವಶ್ಯಕತೆಯಿದ್ದಲ್ಲಿ ಸಮೀಪದ ಅಂಗಡಿ-ಮುಂಗಟ್ಟುಗಳ ಬಳಿ ನಿಂತು ಮಾತನಾಡಬೇಕು. ಆದಷ್ಟು ಮೊಬೈಲ್‍ಅನ್ನು ಜೇಬಿನಲ್ಲಿಟ್ಟು ಹೆಡ್‍ಫೆÇೀನ್ ಬಳಸುವುದು ಸೂಕ್ತ.
ಸಾರ್ವಜನಿಕವಾಗಿ ಮೊಬೈಲ್ ಫೆÇೀನ್‍ಅನ್ನು ಪ್ರದರ್ಶಿಸಬಾರದು. ರಾತ್ರಿ ವೇಳೆ ಸಮೀಪದ ದಾರಿಯನ್ನು ಉಪಯೋಗಿಸದೆ ಜನಸಂದಣಿ ಇರುವ ಸಾರ್ವಜನಿಕ ಮಾರ್ಗವನ್ನು ಉಪಯೋಗಿಸಬೇಕು.
ಮೊಬೈಲ್ ಸುಲಿಗೆಯಾದಲ್ಲಿ ಅಥವಾ ದರೋಡೆಗೆ ಯತ್ನ ನಡೆದಲ್ಲಿ ಇಲ್ಲವೆ ತಮ್ಮ ಮೇಲೆ ಯಾವುದೇ ದಾಳಿ ನಡೆದಲ್ಲಿ ತಕ್ಷಣ ತಮ್ಮ ಸಮೀಪದಲ್ಲಿರುವ ಸಾರ್ವಜನಿಕರನ್ನು ಸಹಾಯಕ್ಕೆ ಕರೆಯಬೇಕು. ಸಾಧ್ಯವಾದಲ್ಲಿ ವಾಹನದ ರಿಜಿಸ್ಟ್ರಾರ್ ನಂತರ ಬರೆದುಕೊಳ್ಳಬೇಕು ಮತ್ತು ಪೆÇಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿ ತಿಳಿಸಬೇಕೆಂದು ಪೆÇಲೀಸ್ ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ