ನಾಪತ್ತೆಯಾಗಿರುವ ರಿಯಲ್‍ಎಸ್ಟೆಟ್ ಉದ್ಯಮಿ ಹಾಗೂ ಸ್ನೇಹಿತನ ಪತ್ತೆಗೆ ನಾಲ್ಕು ತಂಡಗಳ ಕಾರ್ಯಾಚರಣೆ

 

ಬೆಂಗಳೂರು, ಜು.4- ನಿವೇಶನ ನಿಮಿತ್ತ ಮನೆಯಿಂದ ಹೊರಗೆ ತೆರಳಿ ನಾಪತ್ತೆಯಾಗಿರುವ ರಿಯಲ್‍ಎಸ್ಟೆಟ್ ಉದ್ಯಮಿ ಹಾಗೂ ಸ್ನೇಹಿತನ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಈ ತಂಡ ಕಾರ್ಯಾಚರಣೆ ಕೈಗೊಂಡಿದೆ.
ಆರ್‍ಆರ್‍ನಗರದ ನಿವಾಸಿ, ರಿಯಲ್‍ಎಸ್ಟೆಟ್ ಉದ್ಯಮಿ ಪ್ರಸಾದ್‍ಬಾಬು ಎಂಬುವರು ಜೂ.27ರಂದು ನಿವೇಶನ ವ್ಯವಹಾರ ಸಂಬಂಧ ಮನೆಯಿಂದ ಹೊರ ಹೋಗಿ ನಾಪತ್ತೆಯಾಗಿರುವ ಬಗ್ಗೆ ಆರ್.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರೊಂದಿಗೆ ತೆರಳಿದ್ದ ಸ್ನೇಹಿತ, ಗಿರಿನಗರದ ನಿವಾಸಿ ಬಾಲಾಜಿ ಎಂಬುವರು ಸಹ ನಾಪತ್ತೆಯಾಗಿದ್ದು, ಈ ಬಗ್ಗೆ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರಿಬ್ಬರು ನಿವೇಶನ ವ್ಯವಹಾರ ಸಂಬಂಧ ಜೆ.ಪಿ.ನಗರಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಜೂ.27ರಂದು ಹೋಗಿ ನಾಪತ್ತೆಯಾಗಿದ್ದಾರೆ. ಇವರಿಬ್ಬರ ಪತ್ತೆಗಾಗಿ ಡಿಸಿಪಿ ಶರಣಪ್ಪ ಅವರು ನಾಲ್ಕು ವಿಶೇಷ ತಂಡ ರಚಿಸಿದ್ದು, ಈ ತಂಡ ವಿವಿಧಕಡೆ ತೆರಳಿ ಇವರಿಬ್ಬರಿಗಾಗಿ ಶೋಧ ಕೈಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ