
ತುಮಕೂರು,ಜು.4-ಮೊಬೈಲ್ ಅಂಗಡಿಯಲ್ಲಿ ಮಟ್ಕಾ ಆಡಿಸುತ್ತಿದ್ದ ಇಬ್ಬರನ್ನು ಅಪರಾಧ ಪತ್ತೆದಳದ ಪೆÇಲೀಸರು ಬಂಧಿಸಿ 13,780 ರೂ. ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ದಿವ್ಯಗೋಪಿನಾಥ್ ಅವರಿಗೆ ಜಿಲ್ಲೆಯಲ್ಲಿ ಮುಗಿಲು ಮುಟ್ಟಿದೆ ಎಂದು ಗಮನಸೆಳೆಯಲಾಗಿತ್ತು.
ಇದರನ್ವಯ ಜಿಲ್ಲಾ ಅಪರಾಧ ಪತ್ತೆದಳದ ಇನ್‍ಸ್ಪೆಕ್ಟರ್ ರಾಘವೇಂದ್ರ ಅವರಿಗೆ ಹುಳಿಯಾರು ಠಾಣೆ ಸಮೀಪವೇ ರಾಜರೋಷವಾಗಿ ಮೊಬೈಲ್ ಅಂಗಡಿಯಲ್ಲಿ ಅತೀಕ್ ಅಹಮ್ಮದ್ ಎಂಬುವರು ಮಟ್ಕಾ ದಂಧೆ ಎಂಬ ಸುಳಿವು ಸಿಕ್ಕಿದೆ. ಈ ಮಾಹಿತಿ ಮೇರೆಗೆ ಪೆÇಲೀಸ್ ಠಾಣೆ ಸಮೀಪವೇ ಇರುವ ಮೊಬೈಲ್ ಅಂಗಡಿ ದಾಳಿ ಮಾಡಿ ಇಂದು ಬೆಳಗ್ಗೆ ದಾಳಿ ಮಾಡಿ ಹಣ ಹಾಗೂ ಮಟ್ಕಾ ಚೀಟಿಗಳನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ. ಅರೋಪಿಗಳನ್ನು ಹುಳಿಯಾರು ಪೆÇಲೀಸರ ವಶಕ್ಕೆ ನೀಡಲಾಗಿದೆ.