ದಾಖಲೆಗಳನ್ನು ಒದಗಿಸಿ ಎಂದು ಟೀಕಾಕಾರರ ಮೇಲೆ ಎರಗಿದ ಮುಖ್ಯಮಂತ್ರಿ

 

ಬೆಂಗಳೂರು, ಜು.4-ದೇವೇಗೌಡರ ಕುಟುಂಬ ಅಪಾರ ಪ್ರಮಾಣದಲ್ಲಿ ಆಕ್ರಮ ಆಸ್ತಿ ಪಾಸ್ತಿ ಮಾಡಿದೆ ಎಂದು ದಾಖಲೆಗಳಿಲ್ಲದೆ ದೂರುವ ಪ್ರವೃತ್ತಿ ಸರಿಯಲ್ಲ,ಅಂತಹದೇನೇಇದ್ದರೂ ದಾಖಲೆಗಳನ್ನು ಒದಗಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಮ್ಮ ಟೀಕಾಕಾರರ ಮೇಲೆ ಎರಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಬಿಎಂಪಿಯ ಬಿಜೆಪಿ ನಾಯಕರೊಬ್ಬರು,ದೇವೇಗೌಡರ ಕುಟುಂಬ ಅಕ್ರಮವಾಗಿ ಅಪಾರ ಪ್ರಮಾಣದ ಆಸ್ತಿ ಮಾಡಿದೆ ಎಂದು ದೂರಿರುವ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ದೇವೇಗೌಡರ ಕುಟುಂಬ ಹಾಗೇನಾದರೂ ಅಕ್ರಮ ಆಸ್ತಿ ಪಾಸ್ತಿ ಮಾಡಿದ್ದರೆ ಅದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಲಿ.ಸುಖಾ ಸುಮ್ಮನೆ ಹಿಟ್ ಅಂಡ್ ರನ್ ಕೇಸ್ ತರಹ ದೂರುವುದು ಸರಿಯಲ್ಲ.ಗೌರವವೂ ಅಲ್ಲ ಎಂದರು.
ನಮ್ಮ ಕುಟುಂಬದ ಮೇಲೆ ಅಂತಹ ಟೀಕೆಗಳು ಹೊಸತೇನಲ್ಲ.ಹಿಂದಿನಿಂದಲೂ ಇಂತಹ ಟೀಕೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರಲಾಗುತ್ತಿದೆ.ಆದರೆ ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ನುಡಿದರು.

ದೇವೇಗೌಡರ ಕುಟುಂಬ ಅಲ್ಲಿ ಆಸ್ತಿಮಾಡಿದೆ,ಇಲ್ಲಿ ಆಸ್ತಿ ಮಾಡಿದೆ ಎಂಬ ದೂರುಗಳು ಹೇಗೆ ಹೊಸತಲ್ಲವೋ, ಅದೇ ರೀತಿ ಅದಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಗಳೂ ಕಡಿಮೆಯಲ್ಲ.ಆದರೆ ಏನೇ ತನಿಖೆ ಮಾಡಿದರೂ ನಮ್ಮ ಕುಟುಂಬ ಆಕ್ರಮವಾಗಿ ಆಸ್ತಿ ಪಾಸ್ತಿ ಮಾಡಿದೆ ಎಂಬುದಕ್ಕೆ ದಾಖಲೆಗಳು ಸಿಕ್ಕಿಲ್ಲ ಎಂದರು.
ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜ.ಆದರೆ ಟೀಕೆ ಮಾಡುವಾಗ ಅದಕ್ಕೆ ಪೂರಕವಾದ ದಾಖಲೆಗಳನ್ನಿಟ್ಟುಕೊಂಡು ಮಾತನಾಡಬೇಕು.ಆದರೆ ಸುಖಾ ಸುಮ್ಮನೆ ಟೀಕೆ ಮಾಡುವ ಪ್ರವೃತ್ತಿ ಸರಿಯಲ್ಲ ಎಂದು ನುಡಿದರು.
ಹಾಗೇನಾದರೂ ನಾವು ಆಕ್ರಮ ಆಸ್ತಿ,ಪಾಸ್ತಿಮಾಡಿ ಅದಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿಸಿಲ್ಲ ಎಂದಾದರೆ ತಕ್ಷಣವೇ ಈ ಕುರಿತು ಮಾಹಿತಿ ನೀಡಲಿ.ಹಾಗೆ ಮಾಹಿತಿ ನೀಡದೆಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ