ಬೆಂಗಳೂರು ಜೂಲೈ 4: ಚಿಕನ್ ಅಂದ್ರೇ ನಾನ್ವೆಜ್ ಪ್ರಿಯರಿಗೆ ಬಾಯಲ್ಲಿ ನೀರು ಬರುವುದಂತೂ ಖಂಡಿತ. ಎಲ್ಲ ಕಾಲದಲ್ಲೂ ಮಾಂಸಕ್ಕೆ ಬೇಡಿಕೆ ಇರುತ್ತದೆ ಎಂದು ಜನ ಸಾಮಾನ್ಯರು ಅಂದುಕೊಂಡಿರುತ್ತಾರೆ. ಆದರೆ, ಭಾರತದಂತಹ ದೊಡ್ಡ, ವೈವಿಧ್ಯಮಯ ಮಾರುಕಟ್ಟೆಯಲ್ಲಿ ಎಲ್ಲ ಸಮಯದಲ್ಲೂ ಮಾಂಸಕ್ಕೆ ಬೇಡಿಕೆ ಸೃಷ್ಟಿಯಾಗಲ್ಲ. ಮಾರುಕಟ್ಟೆಯ ಅಧ್ಯಯನದ ಪ್ರಕಾರ ವರ್ಷದಲ್ಲಿ 6 ತಿಂಗಳು ಮಾತ್ರ ಮಾಂಸಕ್ಕೆ ಬೇಡಿಕೆ ಇದೆ ಎಂಬುದು ಒಪ್ಪಿಕೊಳ್ಳಬೇಕಾದ ಸತ್ಯ. ಹಬ್ಬ, ಉತ್ಸವಗಳಲ್ಲಿ ಮಾಂಸಕ್ಕಿಲ್ಲ ಬೇಡಿಕೆ ಆದರೆ ಇಯರ್ ಎಂಡ್ ಮತ್ತು ನ್ಯೂ ಇಯರ್ನಲ್ಲಿ ಭರ್ಜರಿ ಡಿಮಾಂಡ್ ಮತ್ತು ಬೇಸಿಗೆಯಲ್ಲಿ ಮಾಂಸದ್ದೇ ಪಾರುಪತ್ಯ
ಮಾ ಇಂಟಿಗ್ರೇಟರ್ಸ್ ಮಾಲೀಕ ಕೆ.ಎಸ್.ಅಶೋಕ್ ಕುಮಾರ್ ಅವರು ಭಾರತದಂತಹ ವೈವಿಧ್ಯಮಯ ಮಾರುಕಟ್ಟೆಯಲ್ಲಿ ವರ್ಷದಲ್ಲಿ 6 ತಿಂಗಳು ಮಾತ್ರ ನಾನ್ವೆಜ್ಗೆ ಬೇಡಿಕೆಯಿದ್ದು, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಉತ್ಪನ್ನ ಪೂರೈಸಿದರೆ ಕೋಳಿ ಸಾಕಾಣಿಕೆ ಉದ್ಯಮದಲ್ಲಿ ಲಾಭಗಳಿಸುಬಹುದು ಎನ್ನುತ್ತಾರೆ.
ಕೋಳಿ ಮೊಟ್ಟೆಯಿಂದ ಮಾಂಸವಾಗುವರೆಗೂ 50 ರಿಂದ 60 ದಿನಗಳು ಬೇಕಾಗುತ್ತದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಮಾಂಸ ಉತ್ಪಾದಿಸುವ ಉತ್ಪಾದಕರು ಲಾಭ ಗಳಿಸುವ ದೃಷ್ಟಿಯಿಂದ ಮಾರುಕಟ್ಟೆಯ ಬೇಡಿಕೆಗೆನುಗುಣವಾಗಿ ಕೋಳಿಗಳನ್ನು ಬೆಳೆಸುತ್ತಾರೆ.