ಹಂಸಲೇಖ, ಅರುಂಧತಿ ನಾಗ್ ಅವರಿಗೆ ಎನ್‍ಟಿಆರ್ ಪ್ರಶಸ್ತಿ

 

ಬೆಂಗಳೂರು, ಜು.4- ಪ್ರತಿ ವರ್ಷ ಕರ್ನಾಟಕ ತೆಲುಗು ಅಕಾಡೆಮಿ ವತಿಯಿಂದ ಎನ್.ಟಿ.ರಾಮರಾವ್ ಜನ್ಮ ಜಯಂತಿ ಅಂಗವಾಗಿ ನೀಡುವ ಎನ್‍ಟಿಆರ್ ಪ್ರಶಸ್ತಿಯನ್ನು ಈ ಬಾರಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಹಾಗೂ ಚಿತ್ರ ನಟಿ ಶಂಕರ್‍ನಾಗ್ ಅವರ ಪತ್ನಿ ಅರುಂಧತಿ ನಾಗ್ ಅವರಿಗೆ ನೀಡಲು ನಿರ್ಧರಿಸಲಾಗಿದೆ.
ಈ ಕುರಿತು ಕರ್ನಾಟಕ ತೆಲುಗು ಅಕಾಡೆಮಿ ಕಾರ್ಯಾಧ್ಯಕ್ಷ ಉಮಾಪತಿ ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತೆಲುಗು ಅಕಾಡೆಮಿ ವತಿಯಿಂದ ಪ್ರತಿ ವರ್ಷ ಡಾ.ಎನ್.ಟಿ.ಆರ್. ಜನ್ಮ ದಿನಾಚರಣೆ ಸಂದರ್ಭದಲ್ಲಿ ಚಲನಚಿತ್ರ ರಂಗದಲ್ಲಿ ಅಪ್ರತಿಮೆ ಸೇವೆ ಮಾಡಿದ ಕಲಾವಿದರನ್ನು ಸನ್ಮಾನಿಸುತ್ತಾ ಬರಲಾಗುತ್ತಿದೆ.
2018ರ ಸಾಲಿನಲ್ಲಿ ಹಂಸಲೇಖ ಹಾಗೂ ಅರುಂಧತಿ ನಾಗ್ ಅವರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ. ಜು.6ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ , ಮಹಾಪೌರರಾದ ಸಂಪತ್‍ರಾಜ್, ಪಿಇಎಸ್ ವಿವಿ ಕುಲಪತಿಗಳಾದ ಎಂ.ಆರ್.ದೊರೆಸ್ವಾಮಿ ನಾಯ್ಡು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಶಾಸಕರಾದ ಗೋಪಾಲಯ್ಯ, ಮುನಿರತ್ನ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಹಾಗೂ ತೆಲುಗು ಕನ್ನಡ ಅಕಾಡೆಮಿಯ ಅಧ್ಯಕ್ಷರಾದ ಆರ್.ವಿ.ಹರೀಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಕಮ್ಮ ಸಂಘದ ಅಧ್ಯಕ್ಷ ರವೀಂದ್ರ , ತೆಲುಗು ವಿಜ್ಞಾನ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯ ಆದಿಕೇಶವುಲು ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ