ಅಮರನಾಥ ಯಾತ್ರಿಕರ ಪರದಾಟ ಮತ್ತು ಅತಂತ್ರ ಸ್ಥಿತಿ

ಶ್ರೀನಗರ, ಜು.4-ಅಮರನಾಥ ಯಾತ್ರಿಕರ ಪರದಾಟ ಮತ್ತು ಅತಂತ್ರ ಸ್ಥಿತಿ ನಡುವೆ ಸಾವು-ನೋವು ಪ್ರಕರಣಗಳೂ ವರದಿಯಾಗುತ್ತಿವೆ. ಭೂಕುಸಿತದಿಂದ ಐವರು ಮೃತಪಟ್ಟಿದ್ದು, ಸತ್ತವರ ಸಂಖ್ಯೆ 13ಕ್ಕೇರಿದೆ. ಬಾಲ್‍ತಾಲ್ ಮಾರ್ಗದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಭೂಕುಸಿತ ಉಂಟಾಗಿ ಐವರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಕೆಲವು ಯಾತ್ರಾರ್ಥಿಗಳು ಮತ್ತು ಅಶ್ವ ಪೆÇೀಷಕರೂ ಗಾಯಗೊಂಡಿದ್ದಾರೆ.
ಅಮರನಾಥ ವಾರ್ಷಿಕ ಯಾತ್ರೆ ವೇಳೆ ಬಾಲ್‍ತಾಲ್ ಮಾರ್ಗದ ರಾಯಿಲ್‍ಪತ್ರಿ ಮತ್ತು ಬ್ರಾರಿಮಾರ್ಗ ನಡುವೆ ಧಾರಾಕಾರ ಮಳೆಯಿಂದ ನೂರಾರು ಯಾತ್ರಿಕರು ಸಂತ್ರಸ್ಥರಾಗಿದ್ದ ಸಂದರ್ಭದಲ್ಲೇ ಮತ್ತೊಂದೆಡೆ ಭೂಕುಸಿತ ಸಂಭವಿಸಿ ಸಾವು-ನೋವು ಉಂಟಾಗಿದೆ ಎಂದು ಉನ್ನತ ಪೆÇಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಭೂಕುಸಿತದಿಂದ ಐವರು ಮೃತಪಟ್ಟ ದುರಂತದ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ಧಾರೆ. 7ನೇ ತಂಡ ಪಯಣ: ಈ ನಡುವೆ ಪ್ರತಿಕೂಲ ವಾತಾವರಣದ ನಡುವೆಯೂ 3,708 ಯಾತಾರ್ಥಿಗಳ 7ನೇ ತಂಡ ಜಮ್ಮುವಿನ ಭಗವಂತ್ ನಗರದ ಮೂಲ ಶಿಬಿರದಿಂದ ಇಂದು ಮುಂಜಾನೆ ಪ್ರಯಾಣ ಬೆಳೆಸಿದೆ. ಈ ತಂಡ ಪ್ರಯಾಣಕ್ಕೆ ಭಾರೀ ಮಳೆ ಆಡ್ಡಿಯಾದರೂ ಅದರನ್ನು ಲೆಕ್ಕಿಸದೇ ಯಾತ್ರಾರ್ಥಿಗಳು ಯಾತ್ರೆ ಮುಂದುವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ