ವೈದ್ಯಕೀಯ ವಿಮೆಯಲ್ಲಿ ಹಣ ಹೂಡಿಕೆ ಬಗ್ಗೆ ಮಾಹಿತಿ

 

ಬೆಂಗಳೂರು, ಜು.3- ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ಸುರಕ್ಷಿತವಾಗಿಡುವುದಕ್ಕೆ ಒಂದೇ ಒಂದು ದಾರಿ ಎಂದರೆ ವೈದ್ಯಕೀಯ ವಿಮೆಯಲ್ಲಿ ಹಣ ಹೂಡಿಕೆ ಮಾಡುವುದು.
ಈ ವೈದ್ಯಕೀಯ ವಿಮೆಯಲ್ಲಿ ಹಣ ತೊಡಗಿಸುವುದರಿಂದ ತುರ್ತು ಸಂದರ್ಭಗಳಲ್ಲಿ ಹಣ ಸಿಗುವುದಷ್ಟೇ ಅಲ್ಲದೆ, ಸೆಕ್ಷನ್ 80ಡಿ ಅಡಿ ತೆರಿಗೆ ಕಡಿತಗೊಳಿಸಲೂ ಸಾಧ್ಯವಿದೆ.
ಹೆಚ್‍ಯುಎಫ್ ವೈಯಕ್ತಿಕ ಯೋಜನೆಯಡಿ ಒಟ್ಟಾರೆ ವಾರ್ಷಿಕ ವರಮಾನದ ಆಧಾರದ ಮೇಲೆ ಸೆಕ್ಷನ್ 80ಡಿ ಅಡಿಯಲ್ಲಿ ತೆರಿಗೆ ಕಡಿತಗೊಳಿಸಲು ಸಾಧ್ಯವಿದೆ. ಯಾವುದೇ ವ್ಯಕ್ತಿ, ಪತ್ನಿ ಅಥವಾ ಪತಿ, ಮಕ್ಕಳು ಮತ್ತು ಪೆÇೀಷಕರಿಗಾಗಿ ವಿಮೆ ಪಾವತಿಸುತ್ತಿದ್ದರೆ, ತೆರಿಗೆ ಕಡಿತಗೊಳಿಸಲು ಮನವಿ ಮಾಡಿಕೊಳ್ಳಬಹುದು.
2017-18ನೆ ಆರ್ಥಿಕ ವರ್ಷದ ಆರಂಭದಿಂದಲೇ ಇಚ್ಛಿಸುವ 60 ವರ್ಷದೊಳಗಿನ ವ್ಯಕ್ತಿಗೆ 25 ಸಾವಿರ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ 30 ಸಾವಿರದವರೆಗೆ ಆರ್ಥಿಕ ವರ್ಷದಲ್ಲಿ ತೆರಿಗೆ ಕಡಿತಗೊಳಿಸಲು ಸಾಧ್ಯವಿದೆ ಎಂದು ಕ್ಲಿಯರ್ ಟ್ಯಾP್ಸï ಸಂಸ್ಥೆ ಸಂಸ್ಥಾಪಕ ಅರ್ಚಿತ್ ಗುಪ್ತಾ ತಿಳಿಸಿದ್ದಾರೆ.
2018-19ನೆ ಆರ್ಥಿಕ ವರ್ಷದಿಂದ ಈ ನಿಯಮದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, 60 ವರ್ಷದೊಳಗಿನವರು 25,000ರೂ. ವರೆಗೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು 50,000ರೂ.ವರೆಗೆ ತೆರಿಗೆ ಕಡಿತ ಹೆಚ್ಚಿಸಲಾಗಿದೆ.
ಇನ್ನೂ ಸಂತೋಷದ ವಿಚಾರವೆಂದರೆ, ತೆರಿಗೆ ಪಾವತಿಸುವ ಯಾವುದಾದರು ವ್ಯಕ್ತಿ, ಪೆÇೀಷಕರು ಮತ್ತು ಹಿರಿಯ ನಾಗರಿಕರು (60 ವರ್ಷಕ್ಕಿಂತ ಮೇಲ್ಪಟ್ಟವರು) ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ 1 ಲಕ್ಷದವರೆಗೆ ತೆರಿಗೆ ಕಡಿತಗೊಳಿಸಲು ಅವಕಾಶವಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ