
ಮುಂಬೈ: ಪದ್ಮಶ್ರೀ ಪುರಸ್ಕೃತ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಬಿಎಂಸಿ ನೋಟೀಸ್ ನೀಡಿದೆ.
ಅಂಧೇರಿಯ ಒಶಿವರಾದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬೃಹತ್ ಮುಂಬೈ ನಗರ ಪಾಲಿಕೆ(ಬಿಎಂಸಿ) ಪ್ರಿಯಾಂಕಾ ಚೋಪ್ರಾ ಅವರಿಗೆ ನೋಟಿಸ್ ನೀಡಿದೆ.
ಚರಿಷ್ಮಾ ಬ್ಯೂಟಿ ಸ್ಪಾ ಮತ್ತು ಸಲೋನ್ ಗೆ ಭೇಟಿ ನೀಡಿದ್ದ ಕೆಲವರು ಅಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಐದು ದೂರು ನೀಡಿದ್ದು ಈ ಸಂಬಂಧ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಕಾನೂನು ಉಲ್ಲಂಘನೆ ಆಗಿರುವುದು ಕಂಡು ಬಂದಿದ್ದು ಈ ಕಟ್ಟಡ ಚೋಪ್ರಾ ಕುಟುಂಬದ ಹೆಸರಿನಲ್ಲಿದ್ದು ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.