3 ಕೆ ಜಿ ಮುದ್ದೆ ಉಣ್ಣುವ ಮೂಲಕ ಪ್ರಥಮ ಸ್ಥಾನ ಪಡೆದ 54 ವರ್ಷದ ಮೀಸೆ ಈರೇಗೌಡ

ಮಂಡ್ಯ:ಜು-2: ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ನಡೆದ ಜಿಲ್ಲಾಮಟ್ಟದ ನಾಟಿಕೋಳಿ ಸಾರು-ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಅರಕೆರೆ ಗ್ರಾಮದ 54 ವರ್ಷದ ಮೀಸೆ ಈರೇಗೌಡ 20 ನಿಮಿಷಗಳಲ್ಲಿ 6 ಮುದ್ದೆ (3 ಕೆಜಿ) ಉಣ್ಣುವ ಮೂಲಕ ಪ್ರಥಮ ಸ್ಥಾನಗಳಿಸಿ ಐದು ಸಾವಿರ ನಗದು ಹಣ ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರು.

ಸುರೇಶ್​ ದ್ವಿತೀಯ, ರಾಮಮೂರ್ತಿ ತೃತೀಯ, ನಂದೀಶ್​, ಕಾರಸವಾಡಿ ಶಂಕರೇಗೌಡ, ಎಚ್​.ಡಿ.ಕೋಟೆಯ ಯೋಗೇಶ್​, ಕಾರೇಕರ್​ ನಾಗೇಶ್​ಗೆ ಸಮಾಧಾನಕರ ಬಹುಮಾನ ದೊರೆತಿದೆ.

ಸ್ಪರ್ಧಿಗಳಿಗಾಗಿ ತಯಾರಾಗಿದ್ದ ರಾಗಿಮುದ್ದೆಗಳು ಒಂದೊಂದೂ ಅರ್ಧ ಕೆ.ಜಿ.ತೂಗುತ್ತಿದ್ದವು. ಈ ಸ್ಪರ್ಧೆಯ ಮಜಾ ಪಡೆಯಲು ಸುತ್ತಲಿನ ಹಳ್ಳಿಯ ಸಾವಿರಾರು ಜನರು ಆಗಮಿಸಿದ್ದರು. ಅಲ್ಲದೆ ಅರ್ಧ ಕ್ವಿಂಟಾಲ್ ನಾಟಿಕೊಳಿ ಮಾಂಸವನ್ನೂ ಸಿದ್ಧ ಪಡಿಸಲಾಗಿತ್ತು.

ಹೆಚ್ಚು ರಾಗಿ ಮುದ್ದೆ ನುಂಗಿದವನಿಗೆ ನಗದು ಬಹುಮಾನದ ಜತೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

Raagi ball eating competition, meese eeregowda, won the trophy

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ