ಅಸಭ್ಯ ವರ್ತನೆ ಆರೋಪ: ಗಾಯಕ ಅಂಕಿತ್ ತಿವಾರಿ ತಂದೆಗೆ ಹೊಡೆದ್ರಾ ವಿನೋಡ್ ಕಾಂಬ್ಳಿ ಪತ್ನಿ

ಮುಂಬೈ:ಜು-2: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಪತ್ನಿ ಆ್ಯಂಡ್ರಿಯಾ ಅವರು ಗಾಯಕ ಅಂಕಿತ್ ತಿವಾರಿ ಅವರ ತಂದೆಗೆ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮುಂಬೈನ ಇನ್ ಆರ್ಬಿಟ್ ಮಾಲ್ ನಲ್ಲಿ ಅಂಕಿತ್ ತಿವಾರಿ ತಂದೆ 59 ವರ್ಷದ ರಾಜೇಂದ್ರ ತಿವಾರಿ ಅವರು ತನ್ನನ್ನು ಅನುಚಿತವಾಗಿ ಪದೇ ಪದೇ ಮುಟ್ಟಿದರು ಎಂಬ ಕಾರಣಕ್ಕೆ ಆ್ಯಂಡ್ರಿಯಾ ತನ್ನ ಕೈಯಲ್ಲಿದ್ದ ಬ್ಯಾಗಿನಿಂದ ಹೊಡೆದಿದ್ದು, ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನು ರಾಜೇಂದ್ರ ತಿವಾರಿ ಅವರು ವಿನೋದ್ ಕಾಂಬ್ಳಿ ಮತ್ತು ಆ್ಯಂಡ್ರಿಯಾ ವಿರುದ್ಧ ಹಲ್ಲೆ ಆರೋಪ ದಾಖಲಿಸಿದ್ದಾರೆ. ಇದೇ ವೇಳೆ ಆ್ಯಂಡ್ರಿಯಾ ಮತ್ತು ಕುಂಬ್ಳೆ ಸಹ ಪೊಲೀಸರಿಗೆ ದೂರು ನೀಡಿದ್ದು ರಾಜೇಂದ್ರ ತಿವಾರಿ ತನ್ನನ್ನು ಕೆಟ್ಟ ಉದ್ದೇಶದಿಂದ ಪದೇ ಪದೇ ಮುಟ್ಟಿದ್ದಾನೆ. ಆತನ ಲೈಂಗಿಕ ಹಿಂಸೆಯನ್ನು ತಾಳಲಾರದೆ ಆತನಿಗೆ ಹೊಡೆದು ಬುದ್ಧಿಕಲಿಸಿದೆ ಎಂದು ಹೇಳಿದ್ದಾರೆ.

ವಿನೋದ್ ಕಾಂಬ್ಳಿ ತನ್ನ ಪತ್ನಿಯ ಮೇಲೆ ಮಾಲ್ ನಲ್ಲಿ ಮೂವರು ದಾಳಿ ಮಾಡಿದ್ದಾರೆ ಎಂದು ಕಾಂಬ್ಳಿ ಎಫ್ಐಆರ್ ನಲ್ಲಿ ಹೇಳಿದ್ದಾರೆ.

Vinod Kambli, Wife Andrea Accused of Assaulting Singer Ankit Tiwari’s Father,Mumbai Mall

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ