ಕೊಚ್ಚಿ,ಜು.2- ಭಾರತೀಯ ವಿದ್ಯಾರ್ಥಿ ಒಕ್ಕೂಟದ ನಾಯಕನೊಬ್ಬನನ್ನು ಇಸ್ಲಾಮಿಕ್ ಪರ ಸಂಘಟನೆಯ ಪದಾಧಿಕಾರಿಗಳು ಹತ್ಯೆ ಮಾಡಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿರುವ ಮಹಾರಾಜ ಕಾಲೇಜು ಆವರಣದಲ್ಲಿ ನಡೆದಿದೆ. ಹತ್ಯೆಯಾದ ಎಸ್‍ಎಫ್‍ಐ ನಾಯಕನನ್ನು ಅಭಿಮನ್ಯು(20) ಎಂದು ಗುರುತಿಸಲಾಗಿದ್ದು, ಕಿಡಿಗೇಡಿಗಳ ದಾಳಿಯಿಂದ ಮತ್ತಿಬ್ಬರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ ಪೆÇೀಷಕ ಸಂಘಟನೆಯಾಗಿರುವ ಕ್ಯಾಂಪಸ್ ಫ್ರಂಟ್‍ನ ಕಾರ್ಯಕರ್ತರು ಈ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಕಾಲೇಜು ಗೋಡೆ ಬರಹ ವಿವಾದ ಕುರಿತಂತೆ ಎರಡು ಸಂಘಟನೆಗಳ ನಡುವಿನ ವಿವಾದವೇ ಈ ಕೊಲೆಗೆ ಕಾರಣ ಎಂದು ಶಂಕಿಸಿರುವ ಪೆÇಲೀಸರು ಈ ಸಂಬಂಧ ಕ್ಯಾಂಪಸ್ ಫ್ರಂಟ್‍ನ ಮೂವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಎಸ್‍ಎಫ್‍ಐ ಮುಖಂಡನ ಹತ್ಯೆ ಖಂಡಿಸಿ ಸಿಪಿಎಂ ಸಂಘಟನೆಯ ವಿದ್ಯಾರ್ಥಿ ವಿಭಾಗ ಇಂದು ಕೇರಳ ಬಂದ್‍ಗೆ ಕರೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಹೀನ ದಾಳಿಯನ್ನು ನಾವು ಕಂಡಿರಲಿಲ್ಲ. ಕೂಡಲೇ ಪ್ರಗತಿಪರರು ಇಂತಹ ಹತ್ಯೆ ವಿರುದ್ಧ ಹೋರಾಡಲು ಮುಂದೆ ಬರಬೇಕು ಎಂದು ಎಸ್‍ಎಫ್‍ಐ ಮುಖಂಡ ರಾಜೀವ್ ಆಗ್ರಹಿಸಿದ್ದಾರೆ.