ಬೆಂಗಳೂರು, ಜು.2- ಸಂಪನ್ಮೂಲ ಕ್ರೋಢೀಕರಣಕ್ಕಾಗಿ ರಾಜ್ಯ ಸರ್ಕಾರ ಈಗ ಕೆಲವೊಂದು ತೆರಿಗೆಗಳನ್ನು ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಇದರ ನಡುವೆ ತೈಲ ಬೆಲೆ ಹಾಗೂ ಕೆಲವೊಂದು ಐಷಾರಾಮಿ ವಸ್ತುಗಳ ಮೇಲೆ ಪರೋಕ್ಷ ತೆರಿಗೆ ಬೀಳುವ ಸಾಧ್ಯತೆ ಇದೆ.
ಈಗಾಗಲೇ ತೈಲ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನು ತಡೆಯುವ ನಿಟ್ಟಿನಲ್ಲಿ ಅಲ್ಪ ಮೊತ್ತದಲ್ಲಿ ತೆರಿಗೆ ಹೆಚ್ಚಿಸಿದರೆ ಇನ್ನು ಆಸ್ತಿ ನೋಂದಣಿ ಹಾಗೂ ಮನರಂಜನಾ ತೆರಿಗೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.