ಪತ್ರಿಕಾ ದಿನಾಚರಣೆ: ಸಮಾಚಾರ ನೆಟ್ವರ್ಕ್ ಸುದ್ದಿ ಸಂಸ್ಥೆ ಮುಖ್ಯಸ್ಥ ಪನ್ನಗರಾಜ್ ಕುಲ್ಕರ್ಣಿ ಸೇರಿ ಸಾಧಕ ಪತ್ರಕರ್ತರಿಗೆ ಪುರಸ್ಕಾರ

ಬೆಂಗಳೂರು-ಜು-1: ಕರ್ನಾಟಕ ಪತ್ರಕರ್ತರ ವೇದಿಕೆ ಹಾಗೂ ಕರ್ನಾಟಕ ಮೀಡಿಯಾ ಸೆಂಟರ್ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಕನ್ನಡಭವನದ ನಯನ ಸಭಾಂಗಣದಲ್ಲಿ ನಡೆದ ಈ ಸಮಾರಂಭ ವನ್ನು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಉದ್ಘಾಟಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು ಸುದ್ದಿ ಕೊಡುವ ಅವಸರದಲ್ಲಿ ಇಂದು ಮಾಧ್ಯಮ ಗಳ ಮೂಲಕ ಅವಸರದ ಅವಘಡಗಳು ಸಂಭವಿಸುತ್ತಿವೆ. ಅನಗತ್ಯ ವೈಭವೀಕರಣ. ವೈಯಕ್ತಿಕ ತೇಜೋವಧೆಯಂತಹ ಚಟುವಟಿಕೆಗಳಿಗೆ ಪತ್ರಕರ್ತರು ಸ್ವಯಂ ಕಡಿವಾಣ ಅಗತ್ಯ ಎಂದು ಅಭಿಪ್ರಾಯ ಪಟ್ಟರು.

ಇದೇವೇಳೆ ಟಿ ವಿ 5 ಸುದ್ದಿ ಸಂಪಾದಕ ಗುರುಪ್ರಸಾದ. ಸ್ವರಾಜ್ ಟಿವಿ ಸಂಪಾದಕಿ ನಾಜಿಯಾ ಕೌಸರ್. ಸಮಾಚಾರ ನೆಟ್ವರ್ಕ್ ಸುದ್ದಿ ಸಂಸ್ಥೆ ಮುಖ್ಯಸ್ಥ ಪನ್ನಗರಾಜ್ ಕುಲ್ಕರ್ಣಿ, ಸಿಂಧನೂರಿನ ಅಶೋಕ ಬೆನ್ನೂರ. ಗಂಗಾವತಿಯ ಶ್ರೀನಿವಾಸ್ ಸೇರಿದಂತೆ ಮಾಧ್ಯಮ ಕ್ಷೇತ್ರದ 20 ಗಣ್ಯರಿಗೆ ‘ಹೂಗಾರ್ ಸ್ಮಾರಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಹೈಕೋರ್ಟ್ ನ್ಯಾಯವಾದಿ ಎ ಎಂ ಜಯಲಿಂಗಯ್ಯ. ಪತ್ರಕರ್ತರ ವೇದಿಕೆ ಅಧ್ಯಕ್ಷ ಮಹೇಶ್ ಬಾಬು. ಮಂಜುನಾಥ. ರಾಘವೇಂದ್ರ ಗಂಗಾವತಿ. ಕೃಷ್ಣಪ್ಪ ಸೇರಿದಂತೆ ಗಣ್ಯರು ಪಾಲ್ಗೊಂಡರು.

ಹಿರಿಯ ಪತ್ರಕರ್ತ ಮಹಾಂತೇಶ ಹಿರೇಮಠ ಪ್ರಸ್ತಾವಿಕ ನುಡಿ ಸಲ್ಲಿಸಿದರು. ವಿವಿಧ ಕಲಾಂಡಗಳಿಂದ ನೃತ್ಯರೂಪಕಗಳು ಜರುಗಿದವು.

Journalist’s Forum, Press Day, Hugar Memorial Award

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ