ಕುವೆಂಪು ಅವರ 114ನೇ ಜಯಂತಿ: ವಿಶ್ವಮಾನವ ಕುವೆಂಪು ಸಾಂಸ್ಕøತಿಕ ಉತ್ಸವ

 

ಬೆಂಗಳೂರು,ಜೂ.30- ಕುವೆಂಪು ಕಲಾನಿಕೇತನ ವತಿಯಿಂದ ಕುವೆಂಪು ಅವರ 114ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ವಿಶ್ವಮಾನವ ಕುವೆಂಪು ಸಾಂಸ್ಕøತಿಕ ಉತ್ಸವ ಕಾರ್ಯಕ್ರಮದಲ್ಲಿ ಕುವೆಂಪು ಅವರ ಪುತ್ರಿ ತಾರಣಿ ಚಿದಾನಂದಗೌಡ ಅವರಿಗೆ ಪ್ರಸಕ್ತ ಸಾಲಿನ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಪ್ರಶಸ್ತಿಯು 25 ಸಾವಿರ ನಗದು, ಬೆಳ್ಳಿ ಪದಕ, ಪ್ರಶಸ್ತಿ ಪತ್ರ ಒಳಗೊಂಡಿದೆ.
ಜು.13ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಸಾಹಿತಿಗಳು, ರಾಜಕೀಯ ಮುಖಂಡರು, ಇನ್ನಿತರೆ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ.
ವೀಣೆ ಪ್ರವೀಣೆಯಾಗಿರುವ ತಾರಣಿ ಚಿದಾನಂದಗೌಡ ಅವರು ವೀಣೆ ಪ್ರವೀಣರಾಗಿದ್ದು,ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಲಾನಿಕೇತನ ಸಂಸ್ಥೆಯು ಹಲವಾರು ವರ್ಷಗಳಿಂದ ಕನ್ನಡ ನಾಡಿನ ಹಿರಿಯ ಚೇತನ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಕಲಾನಿಕೇತನ ಸಂಸ್ಥೆ ವತಿಯಿಂದ ಕುವೆಂಪು ರಚಿಸಿರುವ ವಿವಿಧ ನಾಟಕಗಳು, ಕನ್ನಡ ಸಾಂಸ್ಕøತಿಕ ಉತ್ಸವ, ಕುವೆಂಪು ಜಯಂತಿ ಮತ್ತು ಇನ್ನಿತರೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ