ಹಿಂದುಳಿದ ವರ್ಗಗಳ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಪ್ರತ್ಯೇಕ ಮೀಸಲಾತಿಗೆ ಮನವಿ

 

ಬೆಂಗಳೂರು,ಜೂ.30-ಹಿಂದುಳಿದ ವರ್ಗಗಳ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಪ್ರತ್ಯೇಕ ಮೀಸಲಾತಿ ನೀಡಿ, ಪರಿಶಿಷ್ಟ ಜಾತಿ/ಪಂಗಡದವರಿಗೆ ನೀಡುವಂತೆ ತಮಗೂ ಸೌಲಭ್ಯಗಳನ್ನು ವಿಸ್ತರಿಸಬೇಕೆಂದು ಅಖಿಲ ಕನ್ಟಾಕ ಹೆಳವ ಸಮಾಜ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದೆ.
ಅಲೆಮಾರಿ ಜನಾಂಗದವರನ್ನು ಪ್ರವರ್ಗ-1ರ ಪಟ್ಟಿಯಿಂದ ಕೈಬಿಟ್ಟು ಪ್ರತ್ಯೇಕವಾಗಿ ಶೇ.3ರಷ್ಟು ಮೀಸಲಾತಿ ನೀಡಿ ಎನಟಿ/ಎಸ್‍ಎನ್‍ಟಿ ಜಾತಿ ಪ್ರಮಾಣ ಪತ್ರ, ಜನಾಂಗದವರಿಗಾಗಿ ಪ್ರತ್ಯೇಕ ಇಲಾಖೆ, ಅಭಿವೃದ್ದಿ ನಿಗಮ ಮಂಡಳಿ ಸ್ಥಾಪಿಸಿ, 500 ಕೋಟಿ ಅನುದಾನ ನೀಡಬೇಕು. ಮೂರು ತಿಂಗಳಿಗೊಮ್ಮೆ ತಾಲ್ಲೂಕು, ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು ಎಂದು ಒತ್ತಾಯಿಸಿದೆ.

ಅಲೆಮಾರಿ ಜನಾಂಗದವರು ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು, ಪ್ರತ್ಯೇಕ ಮೀಸಲಾತಿ ಅನ್ವಯ ಈ ಕ್ಷೇತ್ರಗಳಲ್ಲಿ ಸೌಲಭ್ಯ ನೀಡಬೇಕು, ಹೈದರಾಬಾದ್ ಕರ್ನಾಟಕ ಅನುದಾನದಲ್ಲಿಯೂ ಅತಿ ಹಿಂದುಳಿದ ಅಲೆಮಾರಿ, ಅರೆಲೆಮಾರಿನುದಾನವನ್ನು ಕೊಡಬೇಕೆಂದು ಕೋರಿದೆ.
ಹಿಂದುಳಿದ ವರ್ಗಗಳ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರ ಶೈಕ್ಷಣಿಕ ಮಟ್ಟ ಸುಧಾರಿಸಲು ಪ್ರತಿ ಜಿಲ್ಲೆಗೊಂದು ಅಲೆಮಾರಿ ಜನಾಂಗದವರಿಗಾಗಿ ಮೊರಾರ್ಜಿ ವಸತಿ ಶಾಲೆ ಮತ್ತು ಆಶ್ರಮ ಶಾಲೆಗಳನ್ನು ತೆರೆಯುವುದು ಹಾಗೂ ಆರ್‍ಎಂಎಸ್‍ಎ, ಸೈನಿಕ ಶಾಲೆ ಮತ್ತು ನವೋದಯ ಶಾಲೆಗಳಲ್ಲಿ ಮೀಸಲಾತಿ ನೀಡಬೇಕೆಂದು ಮನವಿ ಮಾಡಿದೆ.
ಅಲೆರಮಾರಿ ಜನಾಂಗದವರ ಕೃಷಿ ಕುಟುಂಬಗಳಿಗೆ ಎತ್ತು,ಚಕ್ಕಡಿ, ಬಿತ್ತನೆ ಬೀಜ ಮತ್ತು ಕೃಷಿ ಉಪಕರಣಗಳನ್ನು ಸಬ್ಸಿಡಿ ರೂಪದಲ್ಲಿ ನೀಡಿ ಕೃಷಿಗೆ ಪೆÇ್ರೀ ಅಲೆಮಾರಿ ಸುದಾಯದವರ ದೇವಸ್ಥಾನಗಳ ದುರಸ್ತಿ ಹಾಗೂ ಹೊಸದಾಗಿ ಕಟ್ಟಲು ಯೋಜನೆ ಜಾರಿಗೊಳಿಸುವುದು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಹೆಳವ ಸಮಾಜ ತನ್ನ ಮನವಿಯಲ್ಲಿ ಕೋರಿಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ