`ವೆರಿಗುಡ್ 10/10` ಅಮೆರಿಕಾದಲ್ಲಿ

 

ಕರ್ನಾಟಕದ ಹೆಮ್ಮೆಯ ಚಿತ್ರ ನಿರ್ಮಾಣ ತಂಡ ಗುರುಬಲ ಎಂಟರ್ ಟೇನರ್ಸ್ ಬೆಂಗಳೂರು, ಮುಂಬೈನ ಶ್ರೀಬಾಲಾಜಿ ಕ್ರಿಯೇಷನ್ಸ್ ನೊಂದಿಗೆ ತಯಾರಿಸಿದ `ವೆರಿಗುಡ್ 10/10` ಮಕ್ಕಳಚಿತ್ರ ಇದೇ ದಿನಾಂಕ ಜುಲೈ 1 2018ರಂದು ಅಮೆರಿಕಾದಲ್ಲಿ ಬಿಡುಗಡೆಯಾಗುತ್ತಿದೆ. ಅಮೇರಿಕ ಕನ್ನಡಿಗರಾದ ರವಿ ಹರಸೂರ ಮತ್ತು ಆಕರ್ಷ ಜೈನ್ ಅವರ ಪ್ರಸ್ತುತಿ ಇದಾಗಿದ್ದು, ಅಮೇರಿಕಾದ ಕನ್ನಡಿಗರಿಗೆ ಇದೊಂದು ಅಪರೂಪದ ಅವಕಾಶವಾಗಿದೆ.

ಈಗಾಗಲೆ ಹೈದರಾಬಾದ್, ಮಾಸ್ಕೊ, ರಷ್ಯಾ, ಇಟಲಿಗಳಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಯಶಸ್ವಿಯಾಗಿರುವ `ವೆರಿಗುಡ್ 10/10` ದೋಹಾ, ಕತಾರದಲ್ಲಿ ಜನಬರಿತ ಥೇಟರ್ನಲ್ಲಿ ಪ್ರದರ್ಶನವಾಗಿತ್ತು. ಸದ್ಯದಲ್ಲೆ ಆಸ್ಟ್ರೇಲಿಯಾ, ಲಂಡನ್, ಬಹರೋನ್, ಮಸ್ಕಟ್ಗಳಲ್ಲಿ ರಿಲೀಸಾಗಲಿದೆ. ಕರ್ನಾಟಕದಲ್ಲೂ ತೆರೆ ಕಾಣಲಿರುವ ಈ ಚಿತ್ರ ಜೂನ್ 16ರಂದು ಬೆಂಗಳೂರಿನ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಥೇಟರ್ನಲ್ಲಿ ಹೌಸ್ ಫುಲ್ ಆಗಿ ಪ್ರದರ್ಶನವಾಯಿತು. ಅಲ್ಲದೆ ಅಪಾರ ಮೆಚ್ಚುಗೆ ಪಡೆಯಿತು. ಕರ್ನಾಟಕದ ಬಾಲಕ, ಬಾಲಕಿಯರು, ಪಾಲಕರು ಶಿಕ್ಷಕ ಸಿಬ್ಬಂದಿಗಳು ನೋಡಲೇಬೇಕಾದ ಈ ಚಿತ್ರವನ್ನು ತಮ್ಮೂರಿನ ಥೇಟರ್ಗಳಲ್ಲಿ ಒಂದಾಗಿ ಮರೆಯದೆ ನೋಡ್ರಿ.

ಯಶ್ – ಕಲ್ಯಾಣ್ ನಿರ್ದೇಶನದ (ಯಶವಂತ್ ಸರ್ದೇಶಪಾಂಡೆ – ಕಲ್ಯಾಣ್ರಾಜ್ ಗೊಬ್ಬೂರ್ಕರ್) ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ನೂರಿಪ್ಪತ್ತಕ್ಕೂ ಹೆಚ್ಚು ಮಕ್ಕಳು, ಪಾಲಕರು, ಯಶವಂತ ಸರದೇಶಪಾಂಡೆ, ಮಾಲತಿ ಸರ ದೇಶಪಾಂಡೆ ಹಾಗೂ ಮುಂತಾದವರು ಅಭಿನಯಿಸಿರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ ಖ್ಯಾತ ನಟಿ ಜೂಹಿ ಚಾವ್ಲಾ ಅಭಿನಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ