ಸದ್ಯದಲ್ಲೇ `ಜಗತ್ ಕಿಲಾಡಿ’ ತೆರೆಗೆ

 

ಲಯನ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಲಯನ್ ಆರ್ ರಮೇಶ್ ಬಾಬು ಅವರು ನಿರ್ಮಿಸಿರುವ `ಜಗತ್ ಕಿಲಾಡಿ’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಆರವ್ ಬಿ ಧೀರೇಂದ್ರ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿನಾಯಕರಾಮ ಕಲಗಾರು ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗಿರಿಧರ್ ದಿವಾನ್ ಅವರ ಸಂಗೀತ ನಿರ್ದೇಶನವಿದೆ. ವಿ.ಮನೋಹರ್ ಹಾಗೂ ಉಮೇಶ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ವಿಶ್ವ ಅವರ ಸಂಕಲನ ಜಗತ್ ಕಿಲಾಡಿ` ಚಿತ್ರಕ್ಕಿದೆ.

ನಿರಂಜನ ಕುಮಾರ್ ಶೆಟ್ಟಿ ಅವರು ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅಮಿತಾ ಕುಲಾಳ್, ಜೈಜಗದೀಶ್, ವಿಶ್ವ, ರವಿಚೇತನ್, ಕೌಂಡಿನ್ಯ, ಮೈಕೋ ನಾಗರಾಜ್ ಮುಂತಾದವರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ