ನಂಬಿಸಿ ಕತ್ತು ಸೀಳಿದ ಸ್ನೇಹಿತ!

ತುಮಕೂರು, ಜೂ.29- ನಂಬಿಕೆ ದ್ರೋಹ ಊರಿಗೆ ಹೋಗೋಣವೆಂದು ನಂಬಿಸಿ ಸ್ನೇಹಿತನನ್ನು ಬೈಕ್‍ನಲ್ಲಿ ಕರೆತಂದು ಮಾರ್ಗಮಧ್ಯೆ ಭೀಕರವಾಗಿ ಕೊಲೆ ಮಾಡಿ ಗುರುತು ಸಿಗದಂತೆ ಬೆಂಕಿ ಹಚ್ಚಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೋರಾ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊನ್ನೂರು ಗ್ರಾಮದ ತಿಪ್ಪೇಸ್ವಾಮಿ (38) ಬಂಧಿತ ಆರೋಪಿ. ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ತಿಪ್ಪೇಸ್ವಾಮಿ ಜೂನ್ 17 ರಂದು ತಡರಾತ್ರಿ ನಾಗಾನಂದ (35)ನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದನು.
ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಇವರಿಬ್ಬರು ಬೆಂಗಳೂರಿನಲ್ಲಿ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಜೂ.17 ರಂದು ಊರಿಗೆ ಹೋಗೋಣವೆಂದು ಬೈಕ್‍ನಲ್ಲಿ ನಾಗಾನಂದನನ್ನು ಕರೆದುಕೊಂಡು ರಾತ್ರಿ ಹೊರಟಿದ್ದಾರೆ. ಸೋಮಸಾಗರ ಗೇಟ್ ಬಳಿ ಸ್ಕೆವಾಕ್ ಸಮೀಪವಿರುವ ಭೂ ಶಕ್ತಿ ಕೇಂದ್ರದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಸರ್ವೀಸ್ ರಸ್ತೆಬದಿ ಬೈಕ್ ನಿಲ್ಲಿಸಿದ ತಿಪ್ಪೇಸ್ವಾಮಿ, ನಾಗಾನಂದನೊಂದಿಗೆ ಜಗಳವಾಡಿ ಗುಂಡು ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ ನಂತರ ಗುರುತು ಸಿಗದಂತೆ ಸುಟ್ಟು ಹಾಕಲು ಯತ್ನಿಸಿ ಪರಾರಿಯಾಗಿದ್ದನು. ಜೂ.17 ರಂದು ಬೆಳಗಿನ ಜಾವ ದಾರಿಹೋಕರು ಗಮನಿಸಿ ಶವವನ್ನು ಕಂಡು ತಕ್ಷಣ ಪೆÇಲೀಸರಿಗೆ ತಿಳಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ನಾಗರಾಜ್ ನೇತೃತ್ವದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಮಧುಸೂದನ್, ಕೋರಾ ಠಾಣೆ ಸಬ್‍ಇನ್ಸ್‍ಪೆಕ್ಟರ್ ರವಿಕುಮಾರ್ ಅವರನ್ನೊಳಗೊಂಡ ವಿಶೇಷ ತಂಡ ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ನಡೆಸಿತ್ತು. ಅಂದು ಶವದ ಬಳಿ ದೊರೆತ ಮದ್ಯದ ಬಾಟಲಿ ಹಾಗೂ ನಾಗಾನಂದನ ಬಳಿ ಇದ್ದ ಕೆಲವು ಚೀಟಿಗಳಿಂದ ಈತ ಚಿತ್ರದುರ್ಗ ಮೂಲದ ಹೊನ್ನೂರು ಗ್ರಾಮದವನು ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ತದನಂತರ ಮೊಬೈಲ್ ಟವರ್ ಆಧಾರದ ಮೇಲೆ ಕೊಲೆ ಆರೋಪಿ ಜಾಡು ಹಿಡಿದ ಈ ತಂಡ, ಕೊನೆಗೂ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಏತಕ್ಕಾಗಿ ನಾಗಾನಂದನನ್ನು ಕೊಲೆ ಮಾಡಿದ್ದಾನೆ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಪ್ರಶಂಸೆ: ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ