ನವದೆಹಲಿ:ಜೂ-28: 2016 ಸೆಪ್ಟೆಂಬರ್ 28, 29 ರಂದು ಭಾರತೀಯ ಯೋಧರು ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ದಾಟಿ ನಡೆಸಿದ ಸರ್ಜಿಕಲ್ ಸ್ಟ್ರೈಕ್( ನಿರ್ಧಿಷ್ಟ ದಾಳಿ) ನ ವಿಡಿಯೋ ಬಹಿರಂಗವಾಗಿದೆ.
ಬಂಕರ್ ಗಳು, ಇತರೆ ಕಟ್ಟಡಗಳನ್ನು ಧ್ವಂಸ ಮಾಡುಇವ ಭಯೋತ್ಪಾದಕರ ಶಿಬಿರಗಳನ್ನು ನಾಶಗೊಳಿಸುವ ಮತ್ತು ಕೆಲವು ಉಗ್ರರನ್ನು ಹತ್ಯೆಗೈಯ್ಯುವ ದೃಶ್ಯಗಳು ಈ ವಿಡಿಯೋದಲ್ಲಿದೆ. ವಿಡಿಯೋ ಅಧಿಕೃತ ಮೂಲಗಳಿಂದಲೇ ಲಭ್ಯವಾಗಿವೆ ಎಂದು ಸುದ್ದಿವಾಹಿನಿಗಳು ತಿಳಿಸಿವೆ.
ಕಮಾಂಡೋಗಳ ಹೆಲ್ಮೆಟ್ ಗಳಲ್ಲಿ ಅಳವಡಿಸಲಾಗಿದ್ದ ಕ್ಯಾಮರಾ ಹಾಗೂ ಡ್ರೋನ್ ಕ್ಯಾಮರಾಗಳಿಂದ ಸರ್ಜಿಕಲ್ ದಾಳಿಯ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು.
ಪ್ಯಾರಾ ಕಮಾಂಡೊ ಪಡೆಯ 4 ಹಾಗೂ 9ನೇ ಬೆಟಾಲಿಯನ್ ಈ ಕಾರ್ಯಾಚರಣೆ ಕೈಗೊಂಡಿತ್ತು. ಗಡಿ ನಿಯಂತ್ರಣ ರೇಖೆಯಿಂದ ಸುಮಾರು 2-3 ಕಿಮೀ ದೂರದಲ್ಲಿನ ಉಗ್ರರ ಶಿಬಿರವನ್ನು ಟಾರ್ಗೆಟ್ ಮಾಡಲಾಗಿತ್ತು.
ದಾಳಿಯಲ್ಲಿ ಉಗ್ರರ 7 ನೆಲಗಳನ್ನು ದ್ವಂಸ ಮಾಡಿರುವ ದೃಶ್ಯ ಈಗ ಬೆಳಕಿಗೆ ಬಂದಿದೆ. ಉರಿ ಸೇನಾ ನೆಲೆ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ದಾಳಿ ನಡೆಸಲಾಗಿತ್ತು.