ಬೆಂಗಳೂರು:ಜೂ-28: ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 41 ವಿದೇಶ ಪ್ರವಾಸ ಮಾಡಿ, 52 ದೇಶಗಳಿಗೆ ಭೇಟಿ ನೀಡಿ ಸುಮಾರು 355 ಕೋಟಿ ರು ಖರ್ಚು ಮಾಡಿದ್ದಾರೆ. 165 ದಿನ ವಿದೇಶದಲ್ಲಿ ಕಳೆದಿದ್ದಾರೆ.
ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾದ್ ಮಾಹಿತಿ ಹಕ್ಕು ಕಾಯಿದೆಯಡಿ ಪ್ರಧಾನಿ ಕಚೇರಿಯಿಂದ ಮಾಹಿತಿ ಪಡೆದಿದ್ದಾರೆ. 41 ಪ್ರವಾಸಗಳಲ್ಲಿ 50 ದೇಶಗಳಿಗೆ ಭೇಟಿ ನೀಡಿರುವ ಪ್ರಧಾನಿ 2015ರ ಏಪ್ರಿಲ್ 9 ರಿಂದ 15ರವರೆಗೆ ಮೂರು ರಾಷ್ಚ್ರಗಳ 9 ದಿನ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರು ಫ್ರಾನ್ಸ್, ಜರ್ಮನಿ ಮತ್ತು ಕೆನಡಾಗಳಿಗೆ ಭೇಟಿ ನೀಡಿದ್ದರು. ಈ ಪ್ರವಾಸಕ್ಕೆ ತಗುಲಿದ ವೆಚ್ಚ 31,25,78,000 ರೂಗಳಾಗಿದ್ದು ಇದದು ಅಧಿಕ ವೆಚ್ಚದ ಪ್ರವಾಸವಾಗಿದೆ.
ಜೊತೆಗೆ ಪ್ರಧಾನಿ 2014ರ ಜೂನ್ 15, 16 ರ ನಡುವೆ ಭೂತಾನ್ ಭೇಟಿಗೆಂದು ಖರ್ಚಾದ ಹಣ, 2,45,27,ರೂ ಆಗಿದೆ. ಪ್ರಧಾನಿ ಅವರ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ವಿದೇಶ ಪ್ರವಾಸದ ವೆಚ್ಚ ಕುರಿತು ಮಾಹಿತಿ, ಕೋರಿದ್ದರು. ಕೆಲ ದಿನಗಳ ಹಿಂದೆ ರಾಜ್ಯ ಮುಖ್ಯಮಂತ್ರಿಗಳ ವಿದೇಶ ಪ್ರವಾಸ ಸಂಬಂಧ ಮಾಹಿತಿ ಕೋರಿದ್ದರು. ಪ್ರಧಾನಿ ಅವರ ವಿದೇಶ ಪ್ರವಾಸದ ವೆಚ್ಚದ ಮಾಹಿತಿ ನೋಡಿ ನನಗೆ ಆಘಾತವಾಗಿ ಎಂದು ಭೀಮಪ್ಪ ಹೇಳಿದ್ದಾರೆ.
ಫ್ರಧಾನಿ ಮೋದಿಯ ದೇಶಿಯ ಪ್ರಯಾಣದ ಬಗ್ಗೆ ಪ್ರಧಾನ ಮಂತ್ರಿಗಳ ಕಾರ್ಯಾಲಯ ಸರಿಯಾದ ಮಾಹಿತಿ ನೀಡಿಲ್ಲ, ದೇಶಿಯ ಪ್ರವಾಸದ ವೇಳೆ ಉಂಟಾದ ವೆಚ್ಚ ಹಾಗೂ ಭದ್ರತಾ ಸಿಬ್ಬಂದಿ ಖರ್ಚಿನ ಬಗ್ಗೆ ಮಾಹಿತಿ ನೀಡಲು ಪಿಎಂಓ ನಿರಾಕರಿಸಿದೆ ಎಂದು ಭೀಮಪ್ಪ ಗಡಾದ್ ಹೇಳಿದ್ದಾರೆ.
In 41 trips to 52 countries in 4 years, PM Narendra Modi spent Rs 355 crore, RTI