
ಟಮ್ಲುಕ್ (ಪ.ಬಂ), ಜೂ.28-ಕಾರು ಮತ್ತು ಬಸ್ ನಡುವೆ ಡಿಕ್ಕಿಯಾಗಿ ತೃಣಮೂಲ ಕಾಂಗ್ರೆಸ್‍ನ ಆರು ಕಾರ್ಯಕರ್ತರು ಮೃತಪಟ್ಟು, ಇತರ 12 ಜನರು ತೀವ್ರ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ್ ಜಿಲ್ಲೆಯಲ್ಲಿ ಸಂಭವಿಸಿದೆ. ಮರಿಶಾದಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿ 1168 ಬಳಿ ನಿನ್ನೆ ರಾತ್ರಿ ಈ ದುರಂತ ಸಂಭವಿಸಿತು ಎಂದು ಪೆÇಲೀಸ್ ವರಿಷ್ಠಾಧಿಕಾರಿ ವಿ. ಸಾಲೋಮನ್ ನೆಸಕುಮಾರ್ ಹೇಳಿದ್ಧಾರೆ.
ಈ ದುರ್ಘಟನೆಯಲ್ಲಿ ಕಾರಿನ ಚಾಲಕ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ 12 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸಾವಿಗೀಡಾದ ಆರು ಮಂದಿ ಮುರ್ಷಿದಾಬಾದ್ ಜಿಲ್ಲೆಯ ಟಿಎಂಸಿ ಕಾರ್ಯಕರ್ತರು ಎಂದು ಅವರು ತಿಳಿಸಿದ್ದಾರೆ.