ಸಾಲ ನೀಡಿದ ಬ್ಯಾಂಕ್‍ಗಳಿಗೆ ಮರುಪಾವತಿ ಮಾಡಿದರೆ ಮತ್ತಷ್ಟು ಸೇವೆ ವೃದ್ಧಿ

ಬೆಂಗಳೂರು, ಜೂ.28- ಸಾಲ ನೀಡಿದ ಬ್ಯಾಂಕ್‍ಗಳಿಗೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಮತ್ತಷ್ಟು ಸೇವೆ ವೃದ್ಧಿಯಾಗುವುದರೊಂದಿಗೆ ಅನುಕೂಲವಾಗಲಿದೆ ಎಂದು ರಿಸರ್ವ್ ಬ್ಯಾಂಕ್‍ನ ಹಿರಿಯ ಅಧಿಕಾರಿ ರಾಜಗೋಪಾಲ್ ತಿಳಿಸಿದರು.
ರಾಜಾಜಿನಗರದ ಅಭಿಮಾನಿ ವಸತಿಯಲ್ಲಿ ಎನ್‍ಎಸ್‍ಐಸಿ ಹಾಗೂ ಕಾಸಿಯಾ ಹಮ್ಮಿಕೊಂಡಿದ್ದ ಎಂಎಸ್‍ಎಂಇ ಡೇ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆ, ಸ್ಟಾಟ್ ಅಪ್, ಉದ್ಯಮಿಮಿತ್ರ ಇತ್ಯಾದಿ ಯೋಜನೆ ಕುರಿತು ಉದ್ಯಮಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಅರ್ಹರಿಗೆ ಸಾಲ ಸಿಗಬೇಕು, ಆರ್‍ಬಿಐ ನಿಯಮಗಳು ಪಾಲನೆ ಆಗಬೇಕೆಂದು ಹೇಳಿದರು.
ಬ್ಯಾಂಕುಗಳು ಸೇವೆಗಾಗಿಯೇ ಇದೆ. ಆದರೆ ಕೆಲವೊಂದು ಬಾರಿ ಸಾಲ ಪಡೆದರೂ ಮರುಪಾವತಿ ಮಾಡದೇ ತಪ್ಪಿಸಿಕೊಳ್ಳುತ್ತಾರೆ ಆಗ ಬ್ಯಾಂಕಿನ ಮೇಲೆ ಹೊರೆ ಹೆಚ್ಚಿ ಒತ್ತಡ ಉಂಟಾಗುತ್ತದೆ. ನಷ್ಟಕ್ಕೆ ಸಿಲುಕುತ್ತದೆ. ಇದನ್ನು ತಪ್ಪಿಸಲು ಬ್ಯಾಂಕುಗಳು ಎಚ್ಚರಿಕೆ ವಹಿಸಬೇಕು ಜೊತೆಗೆ ಜನಸ್ನೇಹಿಯಾಗಬೇಕು ಎಂದು ಹೇಳಿದರು.
ಆರ್‍ಬಿಐ ನಿಯಮ ಕೆಲ ಬ್ಯಾಂಕ್‍ಗಳು ಪಾಲಿಸುತ್ತಿಲ್ಲ ಇದರ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಇದರ ವಿರುದ್ಧ ಕ್ರಮಕೈಗೊಳ್ಳುವ ಮುನ್ನ ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕು ಎಂದರು.
ಕಾಸಿಯಾ ಅಧ್ಯಕ್ಷ ಹನುಮಂತೇಗೌಡ ಮಾತನಾಡಿ, ಅರ್ಹರಿಗೆ ಬ್ಯಾಂಕಿನಿಂದ ಸ್ಪಂದನೆ ಸಿಗುತ್ತಿಲ್ಲ ಎಂಎಸ್‍ಎಂಇ ಕೇವಲ ದೊಡ್ಡ ಕಾರ್ಖಾನೆ ಉದ್ಯಮಿಗಳಿಗೆ ಮಾತ್ರ ಸಿಗುತ್ತಿದೆ, ನಯವಂಚಕರಿಗೆ ಅನುಕೂಲವಾಗುತ್ತಿದೆ. ಕಷ್ಟಪಟ್ಟು ದುಡಿಯುವ ಮನಸ್ಸಿರುವವರಿಗೆ ಅನುಕೂಲ, ಪೆÇ್ರೀ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಸಣ್ಣ ಕೈಗಾರಿಕೆಗಳು ಕಷ್ಟದ ಹಾದಿಯಲ್ಲಿದೆ ಇದು ಹೀಗೆ ಮುಂದುವರೆದರೆ ಬಾಗಿಲು ಮುಚ್ಚಿ ಬೀದಿಗೆ ಬೀಳುವ ಆತಂಕ ಎದುರಾಗಿದೆ ಎಂದರು.
ಸಾಲ ನೀಡಲು ಬ್ಯಾಂಕ್‍ನ ಅಧಿಕಾರಿಗಳು ಉದ್ದಿಮೆದಾರರನ್ನು ಅಲೆದಾಡಿಸಬಾರದು. ಬದಲಿಗೆ ಮಾರ್ಗದರ್ಶನ, ಬೆಂಬಲ ನೀಡಬೇಕು ನಮ್ಮ ಬಳಿ ಕಣ್ಣೀರು ಹಾಕುತ್ತಾ ಅನೇಕರು ಬರುತ್ತಾರೆ ಇದನ್ನು ವಿಷಾದದಿಂದ ಹೇಳುತ್ತಿದ್ದೇವೆ, ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಿದರೆ ದುಡಿಯುವ ಕೈಗಳಿಗೆ ಕೆಲಸ ಸಿಗುತ್ತದೆ, ರಾಜ್ಯ, ದೇಶ ಉದ್ಧಾರವಾಗುತ್ತದೆ ಎಂದರು. ಅಂಧ್ರಾಬ್ಯಾಂಕ್‍ನ ವಲಯ ಮುಖ್ಯ ಮಹಾಪ್ರಬಂಧಕ ಗೋಪಾಲಕೃಷ್ಣ ಮಾತನಾಡಿ, ನಮ್ಮ ಬ್ಯಾಂಕ್‍ನಿಂದ ಸಾರ್ವಜನಿಕರಿಗೆ , ಉದ್ಯಮಿಗಳಿಗೆ ಎಲ್ಲ ರೀತಿಯ ಸವಲತ್ತುಗಳನ್ನು ನೀಡುತ್ತಿದ್ದೇನೆ. ಗ್ರಾಹಕರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಹೇಳಿದರು. ಬೆಂಗಳೂರಿನಲ್ಲಿ 125 ಶಾಖೆಗಳನ್ನು ಜನಸ್ನೇಹಿಯಾಗಿ ಪರಿವರ್ತಿಸಿ ಗ್ರಾಹಕರಿಗೆ, ತಂತ್ರಜ್ಞಾನ ಸೇವೆಯನ್ನು ಉತ್ತಮ ರೀತಿಯಲ್ಲಿ ನೀಡುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಕಾಸಿಯಾ ಕಾರ್ಯದರ್ಶಿ ಉಮಾಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ