
ಹುಬ್ಬಳ್ಳಿ- ನಾಲ್ಕೈದು ಜನರ ದುಷ್ಕರ್ಮಿಗಳ ತಂಡ, ಯುವಕನೋರ್ವನಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಹುಬ್ಬಳ್ಳಿಯಲ್ಲಿ ತಡರಾತ್ರಿ ನಡೆದಿದೆ. ಹಳೇ ಹುಬ್ಬಳ್ಳಿ ಗವಿ ಓಣಿಬಳಿ ಈ ಘಟನೆ ನಡೆದಿದ್ದು, ವಿನಾಯಕ ಬಸವ ಎಂಬಾತನೆ ಚಾಕು ಇರಿತಕ್ಕೊಳಗಾದ ಯುವಕ. ಅಪರಿಚಿತ ವ್ಯಕ್ತಿಗಳ ತಂಡವೊಂದು ಏಕಾಏಕಿ ವುನಾಯಕ ಬಸವ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಘಟನೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗುತ್ತಿದ್ದು, ಸದ್ಯ ಗಾಯಾಳು ವಿನಾಯಕ ಬಸವ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಕಮರಿಪೇಟೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.