ಬೆಂಗಳೂರು, ಜೂ.27-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಮುಗಿಸಿ ನಾಳೆ ಬೆಂಗಳೂರಿಗೆ ಹಿಂದಿರುಗುತ್ತಿರುವ ಬೆನ್ನಲ್ಲೇ ರಾಜಕೀಯ ರಂಗದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಕಳೆದ 12 ದಿನಗಳಿಂದ ಪ್ರಕೃತಿ ಚಿಕಿತ್ಸೆ ಪಡೆದ ಸಿದ್ದರಾಮಯ್ಯ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಈಗಾಗಲೇ ರಾಜ್ಯ ರಾಜಕೀಯ ಹಾಗೂ ಬಜೆಟ್ ಮಂಡನೆ ಬಗ್ಗೆ ಉಂಟಾದ ಕೆಲ ವಿಷಯಗಳಲ್ಲಿನ ಗೊಂದಲಗಳಲ್ಲಿ ಪರ-ವಿರೋಧಗಳು ಸಾಕಷ್ಟು ಕೇಳಿ ಬಂದಿದ್ದವು. ಈ ಹಿನ್ನೆ¯ಯಲ್ಲಿ ಸಿದ್ದರಾಮಯ್ಯ ಆಗಮನ ಹಾಗೂ ನಡೆ ಏನೆಂಬ ಬಗ್ಗೆ ಎಲ್ಲರಲ್ಲೂ ಪ್ರಶ್ನೆ ಮೂಡಿಸಿದೆ.
ಒಂದೆಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆಗಾಗಿ ನಿರಂತರವಾಗಿ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದು, ಕಾಂಗ್ರೆಸ್‍ನ ಹೈಕಮಾಂಡ್ ಸೇರಿದಂತೆ ಸಚಿವರಾದ ಡಿ.ಕೆ.ಶಿವಕುಮಾರ್, ಪರಮೇಶ್ವರ್ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಈಗಾಗಲೇ ರೈತರ ಸಾಲ ಮನ್ನಾ ಹಾಗೂ ಹೊಸ ಬಜೆಟ್ ಮಂಡನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಅವರನ್ನು ಭೇಟಿ ಮಾಡಿದ್ದ ಶಾಸಕರೊಂದಿಗೆ ಚರ್ಚೆ ಮಾಡುವಾಗಲೂ ಸಾಲ ಮನ್ನಾ ಮಾಡಿದರೆ ದುಡ್ಡಿಗೆ ಏನು ಮಾಡ್ತಾರೆ. ಹೊಸ ಬಜೆಟ್ ಅಗತ್ಯವಿಲ್ಲ ಎಂದೇ ಹೇಳಿದ್ದರು.
ಇದಕ್ಕೆ ಕುಮಾರಸ್ವಾಮಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿ, ನನಗೆ ಕಾಂಗ್ರೆಸ್‍ನ ಹಂಗಿಲ್ಲ, ಬಜೆಟ್ ಮಂಡಿಸಿಯೇ ಮಂಡಿಸುತ್ತೇನೆ ಎಂದು ಘೋಷಿಸಿದ್ದರು.
ಈ ಹಂತದಲ್ಲಿ ಸಿದ್ದರಾಮಯ್ಯ ಅವರ ಮರು ರಂಗ ಪ್ರವೇಶ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಸಿದ್ದರಾಮಯ್ಯಬರುತ್ತಿದ್ದಂತೆ ರಾಜಕೀಯ ಕ್ಷೇತ್ರದ ಚಟುವಟಿಕೆಗಳು ಬಿರುಸುಗೊಳ್ಳಬಹುದೆಂಬ ಮಾತುಗಳು ಕೇಳಿ ಬರುತ್ತಿವೆ.
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕೆಲ ಹಿರಿಯ ಶಾಸಕರ ಭಿನ್ನಮತೀಯ ಚಟುವಟಿಕೆಗಳು ಅಥವಾ ಗುಂಪುಗಾರಿಕೆ ನಡೆಸುವವರಿಗೆ ಈಗಾಗಲೇ ಹೈಕಮಾಂಡ್ ಬ್ರೇಕ್ ಹಾಕಿತ್ತು. ಆದರೆ ಈಗ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಹಾಗೂ ಸಾಲ ಮನ್ನಾ ವಿಚಾರವಾಗಿ ಮತ್ತೆ ಅವರು ಆಕ್ಷೇಪ ವ್ಯಕ್ತಪಡಿಸುವರೇ ಅಥವಾ ಸಹಕಾರ ನೀಡುವರೇ ಎಂಬ ಬಗ್ಗೆ ಅನುಮಾನ ಮೂಡುತ್ತಿದೆ.
ಒಂದು ವೇಳೆ ಸಹಕಾರ ನೀಡದೆ ವಿರೋಧ ವ್ಯಕ್ತಪಡಿಸಿದರೆ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಹೆಚ್ಚಾಗುವ ಸಾಧ್ಯತೆ ಇದ್ದು, ಬಣ ರಾಜಕೀಯ ಹಾಗೂ ಶಕ್ತಿ ಕೇಂದ್ರ ಸಂಖ್ಯೆಯೂ ಹೆಚ್ಚಾಗಲಿದೆ. ಮುಂಬರುವ ಲೋಕಸಭೆ ಚುನಾವಣೆವರೆಗೂ ಸರ್ಕಾರ ಇರುತ್ತದೋ, ಇಲ್ಲವೋ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರ ಪರ ಸಂಪುಟದಲ್ಲಿ ಸ್ಥಾನ ವಂಚಿತರು ನಿಲ್ಲುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಆದರೆ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಕುಮಾರಸ್ವಾಮಿ ಉತ್ತಮ ಬಜೆಟ್ ಮಂಡನೆಗಾಗಿ ನಿರಂತರ ತಯಾರಿಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‍ನ ಬಹುತೇಕರು ಕುಮಾರಸ್ವಾಮಿಯವರ ಬೆಂಬಲಕ್ಕೆ ನಿಂತಿದ್ದರೂ ಅಂತಿಮವಾಗಿ ಭಿನ್ನಮತೀಯ ಚಟುವಟಿಕೆಗಳು ಗರಿಗೆದರಿದರೆ ಕಾಂಗ್ರೆಸ್‍ನ ಹೈಕಮಾಂಡ್ ಮಧ್ಯಪ್ರವೇಶಿಸಿ ತಿಳಿ ಹೇಳುವ ಪ್ರಮೇಯವೂ ಬರಬಹುದು. ಈ ಎಲ್ಲಾ ಸಾಧ್ಯತೆಗಳ ಹಿನ್ನೆ¯ಯಲ್ಲಿ ಸಿದ್ದರಾಮಯ್ಯ ಆಗಮನ ಕುತೂಹಲ ಕೆರಳಿಸಿದ್ದು, ಯಾವ ತಿರುವು ಪqಯಲಿದೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ನಾಳೆ 10 ಗಂಟೆಗೆ ಧರ್ಮಸ್ಥಳದ ಶಾಂತಿವನದಿಂದ ಚಿಕಿತ್ಸೆ ಪೂರೈಸಿ ಮಾನಸಿಕ ಹಾಗೂ ದೈಹಿಕವಾಗಿ ಫಿಟ್ನೆಸ್‍ನೊಂದಿಗೆ ಬರುತ್ತಿರುವ ಅವರು ಎರಡನೇ ಇನ್ನಿಂಗ್ಸ್ ಯಾವ ರೀತಿ ಆರಂಭಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.