ನಾಡಪ್ರಭು ಕೆಂಪೇಗೌಡರ ಜಯಂತಿ: ಫ್ರೀಡಂ ಪಾರ್ಕ್‍ನಿಂದ ಅರಮನೆ ಮೈದಾನದವರೆಗೂ ಬೃಹತ್ ಮೆರವಣಿಗೆ

 

ಬೆಂಗಳೂರು, ಜೂ.27-ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಇಂದು ನಗರದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಿಂದ ಕೆಂಪೇಗೌಡರ ಜಯಂತ್ಯೋತ್ಸವ ಅರಮನೆ ಮೈದಾನದವರೆಗೂ ಬೃಹತ್ ಮೆರವಣಿಗೆ ನಡೆಸಲಾಯಿತು.

ಕೆಂಪೇಗೌಡರ ಹುಟ್ಟೂರಾದ ದೇವನಹಳ್ಳಿಯ ಆವುತಿಯಿಂದ ಸುಮಾರು 4 ಸಾವಿರ ಮಂದಿ ಅಲ್ಲಿನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ನೇರವಾಗಿ ಅರಮನೆ ಆವರಣಕ್ಕೆ ಆಗಮಿಸಿದರು.
ನಾಡಪ್ರಭು ಕೆಂಪೇಗೌಡರ ಪುತ್ಥಳಿ, ವಿವಿಧ ಜಾನಪದ ಕಲಾತಂಡಗಳು ಸೇರಿದಂತೆ ಹಲವಾರು ಮಂದಿ ಮೆರವಣಿUಯಲ್ಲಿ ಪಾಲ್ಗೊಂಡಿದ್ದರು.

ಇತ್ತ ನಗರದ ಕೆಂಪಾಂಬುಧಿ ಕೆರೆ, ಒಕ್ಕಲಿಗರ ಸಂಘ, ಹಲಸೂರು, ಲಾಲ್‍ಬಾಗ್ ಹಾಗೂ ಮಾಗಡಿಯಿಂದ ವಾಹನಗಳ ಮೂಲಕ ಬಂದ ಸಾವಿರಾರು ಮಂದಿ ಫ್ರೀಡಂಪಾರ್ಕ್‍ನಲ್ಲಿ ಒಗ್ಗೂಡಿ ಅಲ್ಲಿಂದ ಬೆಳ್ಳಿ ರಥದಲ್ಲಿ ನಾಡಪ್ರಭುವಿನ ಪುತ್ಥಳಿ, ಕೆಂಪೇಗೌಡರ ವೇಷಭೂಷಣ ತೊಟ್ಟ ಹಲವರು ಸಾಂಸ್ಕøತಿಕ ಕಲಾ ತಂಡಗಳು ಹಾಗೂ ಮಹಿ¼ಯರು ಮೆರವಣಿUಯಲ್ಲಿ ಚಾಲುಕ್ಯ ವೃತ್ತ, ಸ್ಯಾಂಕಿ ರಸ್ತೆ, ಪ್ಯಾಲೇಸ್ ಗುಟ್ಟಹಳ್ಳಿ, ಬಳ್ಳಾರಿ ರಸ್ತೆಯಿಂದ ಮೇಖ್ರಿವೃತ್ತದ ಮೂಲಕ ಅರಮನೆ ಮೈದಾನಕ್ಕೆ ತೆರಳಿದರು.
ದಾರಿಯುದ್ದಕ್ಕೂ ಕಲಾ ತಂಡಗಳ ಪ್ರದರ್ಶನ ಆಕರ್ಷಿಸಿದವು. ಹಸಿರು ಸೀgಯುಟ್ಟ ಮಹಿ¼ಯರು ಮೆರವಣಿUಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು.
ಈ ಮೆರವಣಿUಯ ನೇತೃತ್ವವನ್ನು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಖಜಾಂಚಿ ಕಾಳೇಗೌಡ ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್‍ನ ಅಧ್ಯಕ್ಷ ಸಿವಿ. ದೇವರಾಜು ವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ