ಮೂಲೆಗುಂಪಾದ ರೈತ ಬೆಳಕು ಯೋಜನೆ

 

ಬೆಂಗಳೂರು,ಜೂ.27- ಕಾಂಗ್ರೆಸ್-ಜೆಡಿಎಸ್ ನಡುವೆ ಬಜೆಟ್ ಮಂಡನೆ ಹಾಗೂ ರೈತರ ಸಾಲಮನ್ನಾ ಮಾಡುವ ವಿಷಯದಲ್ಲಿ ಜಟಾಪಟಿ ತಾರಕಕ್ಕೇರಿರುವ ಬೆನ್ನಲ್ಲೇ ಹಿಂದಿನ ಸರ್ಕಾರದ ರೈತ ಬೆಳಕು ಯೋಜನೆ ಮೂಲೆಗುಂಪು ಆಗುವ ಸಂಭವವಿದೆ.
ಜುಲೈ5ರಂದು ಹಣಕಾಸು ಖಾvಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಹಾಗೂ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಯೋಜನೆಯಾದ ರೈತ ಬೆಳಕು ಜಾರಿ ಮಾಡಲಾಗಿತ್ತು.

ಈ ಯೋಜನೆಗೆ ಸುಮಾರು 3.5 ಸಾವಿರ ಕೋಟಿಯಿಂದ 4 ಸಾವಿರ ಕೋಟಿ ವೆಚ್ಚ ತಗುಲುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವುದರಿಂದ ಯೋಜ£ಯನ್ನು ಕೈಬಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಕಳೆದ ಒಂದು ವಾರದಿಂದ ಕುಮಾರಸ್ವಾಮಿ ಅವರು ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಹೊರೆ ಮಾಡುವ ಯೋಜನೆಗಳಿಗೆ ಕೋಕ್ ನೀಡುವುದು ಖಚಿತವಾಗಿದೆ.

ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಲೇಬೇಕಾದ ಇಕ್ಕಟ್ಟಿಗೆ ಕುಮಾರಸ್ವಾಮಿ ಸಿಲುಕಿರುವುದರಿಂದ ಕೆಲವು ಅನಗತ್ಯ ಯೋಜನೆಗಳನ್ನು ರದ್ದುಪಡಿಸುವ ಮುನ್ಸೂಚ£ಯನ್ನು ನೀಡಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವ ಕಾರಣ ಕಾಂಗ್ರೆಸ್-ಜೆಡಿಎಸ್‍ನ ಪ್ರಣಾಳಿPಯಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕಾಗಿರುವುದರಿಂದ ರೈತ ಬೆಳಕು ಯೋಜನೆ ಸೇರಿದಂತೆ ಕೆಲವು ಯೋಜನೆಗಳಿಗೆ ಬ್ರೇಕ್ ಬೀಳಲಿದೆ ಎಂದು ತಿಳಿದುಬಂದಿದೆ.

ಏನಿದು ಯೋಜನೆ:
ಅಂದಹಾಗೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಸೋಲಾರ್ ವಿದ್ಯುತ್ ತಯಾರಿಸಿ ತಾವು ಬಳಕೆ ಮಾಡಿಕೊಂಡು ಹೆಚ್ಚುವರಿಯಾಗಿ ಉಳಿದಿರುವ ವಿದ್ಯುತ್‍ನ್ನು ಪೂರೈಕೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.
ಓರ್ವ ರೈತ ಒಂದು ಹೆಕ್ಟೇರ್‍ನಲ್ಲಿ ಸೌರವಿದ್ಯುತ್ ಅಳವಡಿಸಿಕೊಂಡರೆ ಸರ್ಕಾರ ಆತನಿಗೆ ಸಬ್ಸಿಡಿ ಹಣವಾಗಿ 5ರಿಂದ 10 ಸಾವಿರ ಹಣವನ್ನು ನೀಡುತ್ತಿತ್ತು.ಇದರಿಂದ ಸುಮಾರು 70 ಲಕ್ಷ ರೈತರು ನೆರವು ಪqಯುತ್ತಿದ್ದರು. ಸರ್ಕಾರ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಈ ಸಹಾಯ ಧನವನ್ನು ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡುತ್ತಿತ್ತು.
ಆದರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಬೀಳುತ್ತಿರುವುದರಿಂದ ಇಂತಹ ಜನಪ್ರಿಯ ಯೋಜನೆಗಳಿಗೆ ಕಡಿವಾಣ ಬೀಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ