ಬೆಂಗಳೂರು, ಜೂ.26-ಇಂದು ಕ್ರೀಡೆಯನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇವೆ. ಕ್ರೀಡೆಯನ್ನು ಯುದ್ಧದಂತೆ ಮತ್ತು ಯುದ್ಧವನ್ನು ಕ್ರೀಡೆಯಂತೆ ಆಡುತ್ತಿದ್ದೇವೆ. ಇದು ಅದಲು-ಬದಲಾಗಬೇಕು ಎಂದು ಆರ್ಟ್ ಆಫ್ ಲೀವಿಂಗ್‍ನ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿ ಸಲಹೆ ಮಾಡಿದ್ದಾರೆ.
ವಲ್ರ್ಡ್ ಫೆÇೀರಂ ಫಾರ್ ಎಥಿಕ್ಸ್ ಇನ್ ಬಿಸ್ನೆಸ್ (ಡಬ್ಲ್ಯುಎಫ್‍ಇಬಿ) ಸಂಸ್ಥೆ ನಗರದಲ್ಲಿ ಆಯೋಜಿಸಿದ್ದ ಶುದ್ಧ ಕ್ರೀಡೆ-ನಿಷ್ಪಕ್ಷಪಾತವಾದ ಪರಿಣಾಮ ಕುರಿತ ನೈತಿಕ ಸಮಾವೇಶದಲ್ಲಿ ಅವರು ಮಾತನಾಡಿ, ಕ್ರೀqಯಲ್ಲಿ ನೈತಿಕತೆ ರಾರಾಜಿಸಲು ಸರಿಯಾದ ಮನೋಭಾವನೆ ಹೊಂದುವುದು ಅಗತ್ಯ ಎಂದು ಸಲಹೆ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಕ್ರೀಡೆ ವ್ಯಾಪಾರೀಕರಣವಾಗುತ್ತಿದೆ. ಕೆಲವು ದಶಕಗಳಿಂದ ಕ್ರೀಡೆಯೊಂದಿಗೆ ವ್ಯಾಪಾರವು ವ್ಯಾಪಕವಾಗಿ ಸೇರಿದೆ. ವ್ಯಾಪಾರವು ಕ್ರೀqಯ ಒಂದು ಭಾಗವಾಗಿರಬೇಕೇ ಹೊರತು ಕೀಡೆಯೇ ವ್ಯಾಪಾರವಾಗಬಾರದು ಎಂದು ಅಭಿಪ್ರಾಯಪಟ್ಟರು.
ನಾರ್ವೆ ಪ್ರಧಾನಮಂತ್ರಿ ಎರ್ನ್ ಸೋಲ್ಬರ್ಗ್, ಆಂಟಿ-ಡೋಪಿಂಗ್ ಸಂಸ್ಥೆಯ ಉಪಾಧ್ಯಕ್ಷ ಲಿಂಡಾ ಹೋಫ್ಸ್ಟಾಡ್, ಕಾನೂನು ತಜ್ ಪೆÇ್ರ. ರಿಚರ್ಡ್ ಮೆಕ್ಲಾರೆನ್, ತನಿಖಾ ವಿಭಾಗದ ಮುಖ್ಯಸ್ಥ ಗುನ್ಟ್‍ಸರ್ ಯಂಗರ್, ನ್ಯೂಜಿಲೆಂಡ್ ಮಾಜಿ ಕ್ರೀಡಾ ಸಚಿವ ಕ್ಲೆಏಟನ್ ಕಾಸ್ ಗ್ರೋವ್, ಜರ್ಮನ್ ಸಂಸದ ಡಾಗ್ಮಾರ ಫ್ರೀಟಾಗ್, ಅಮೆರಿಕದ ಆಂಟಿಡೋಪಿಂಗ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟ್ರಾವಿಸ್ ಟೈಗಾರ್ಟ್ ಮೊದಲಾದವರು ಸಮಾವೇಶದಲ್ಲಿ ಭಾಗವಹಿಸಿದ್ದರು.
ಆಂಟಿ ಡೋಪಿಂಗ್ ನೀತಿ ಸಂಹಿvಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಯಿತು. ಕ್ರೀಡೆ ಮಾದಕ ವಸ್ತುಗಳ ವ್ಯಸನದೊಳಗೆ ಸಿಲುಕಿದ್ದು ಹೇಗೆ ? ಕ್ರೀಡಾಪಟುಗಳು ನ್ಯಾಯ ಬದ್ಧವಾಗಿ ಭಾಗವಹಿಸುವಂತೆ ಮಾಡಲು ನಾವು ಸಾಕಷ್ಟು ಶ್ರಮಿಸಿದ್ದೇವೆಯೇ? ಅಂಟಿಡೋಪಿಂಗ್ ವಿನ್ಯಾಸವನ್ನು ಹೇಗೆ ಬಲಪಡಿಸಬೇಕು? ಮೊದಲಾದ ವಿಷಯಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಯತು.