ಬೆಂಗಳೂರು,ಜೂ.27- ರೈತರು ಬೆಳೆ ಬೆ¼ಯಲು ಮಾಡಿರುವ ಸಾಲವನ್ನು ರೈತರ ಸಾಲವೆಂದು ಪರಿಗಣಿಸದೆ ದೇಶದ ಆಹಾರ ಉತ್ಪಾದನೆಗಾಗಿ ಸರ್ಕಾರದಿಂದ ನೀಡಿರುವ ಧನಸಹಾಯವೆಂದು ಪರಿಗಣಿಸಿ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಆಹಾರವನ್ನು ಉತ್ಪಾದನೆ ಮಾಡಲು ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇನ್ನಿತರೆ ಉತ್ಪಾದನೆ ವೆಚ್ಚವನ್ನು ನೀಡುವುದು ಸರ್ಕಾರದ ಜವಾಬ್ದಾರಿ. ಆದರೆ ರೈತರಿಗೆ ಈ ಹಣವನ್ನು ಸಾಲದ ರೂಪದಲ್ಲಿ ನೀಡುತ್ತಿದ್ದು, ಕಳೆದ 70 ವರ್ಷಗಳಿಂದಲೂ ರೈತರನ್ನು ಸಾಲಗಾರರ ಸ್ಥಿತಿಯಲ್ಲಿಯೇ ಸರ್ಕಾರಗಳು ಮುಂದುವರೆಸಿಕೊಂಡು ಬಂದಿದೆ ಎಂದರು.
ಇಂತಹ ಸಾಲವನ್ನು ರೈತರ ಸಾಲವೆಂದು ಪರಿಗಣಿಸದೆ ರೈತರು ಬೆಳೆದ ಆಹಾರವನ್ನು ಬಳಸುವ ದೇಶದ ಪ್ರತಿ ಪ್ರeಯ ಸಾಲವೆಂದು ಪರಿಗಣಿಸಿ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಡಾ.ಎಂ.ಎಸ್. ಸ್ವಾಮಿನಾಥನ್ ವರದಿಯ ತೀರ್ಪು ಮತ್ತು 50 (ರೈತರ ಕೃಷಿ ಉತ್ಪಾದನೆಗಳ ಸೇರಿದಂತೆ ಶೇ.50ರಷ್ಟು ಉತ್ಪಾದನಾ ವೆಚ್ಚದ ಹಣವನ್ನು ಲಾಭಾಂಶವಾಗಿ ಸೇರ್ಪಡೆ ಮಾಡುವುದನ್ನು ಜಾರಿಗೆ ತರಬೇಕು. ಮತ್ತು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮೂಲಕ ಮಹಿ¼ಯರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ನಾಗರಾಜು, ಕಾರ್ಯದರ್ಶಿ ಹನುಮಂತಪ್ಪ ಹೊಳೆಯಾಸೆ ಇದ್ದರು.