ದೇಶದಲ್ಲೇ ಕರ್ನಾಟಕ ಪೆÇಲೀಸ್ ವಿಶಿಷ್ಟವಾದ ಹೆಸರು ಪಡೆದಿದೆ – ಡಾ.ಡಿ.ಪರಮೇಶ್ವರ್

ಕೊಪ್ಪಳ, ಜೂ.27- ದೇಶದಲ್ಲೇ ಕರ್ನಾಟಕ ಪೆÇಲೀಸ್ ವಿಶಿಷ್ಟವಾದ ಹೆಸರು ಪಡೆದಿದೆ ಮತ್ತು ಮಾದರಿಯಾಗಿದೆ. ಅದನ್ನು ಉಳಿಸಿಕೊಂಡು ಕಾಪಾಡಿಕೊಳ್ಳುವುದು ನಿಮ್ಮೆಲ್ಲರ ಹೊಣೆ ಎಂದು ಡಿಸಿಎಂ ಹಾಗೂ ಗೃಹ ಸಚಿವ ಡಾ.ಡಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು.
ಮುನಿರಾಬಾದ್‍ನಲ್ಲಿಂದು ಕೆಎಸ್‍ಆರ್‍ಪಿ ತರಬೇತಿ ಶಾ¯ಯಲ್ಲಿ ನಡೆದ ತರಬೇತಿ ಪೂರ್ಣಗೊಳಿಸಿದ ಸಿಬ್ಬಂದಿಗಳ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಸ್ತು , ಜವಾಬ್ದಾರಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಮಹತ್ವದ ಕೆಲಸ ನಿಮ್ಮದಾಗಿದೆ. ಹೊಸದಾಗಿ ಪೆÇಲೀಸ್ ಇಲಾಖೆಗೆ ಸೇರ್ಪಡೆಯಾಗುತ್ತಿರುವ ಇದರ ಬಗ್ಗೆ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚಿದಂತೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇದರಲ್ಲಿ ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ಮಹತ್ವದ್ದಾಗಿದೆ. ಪೆÇಲೀಸರೆಂದರೆ ಜನರ ಮನಸ್ಸಿನಲ್ಲಿ ಭಯವಿದೆ. ಜನಸ್ನೇಹಿಗಳಾಗಿ ಕೆಲಸ ಮಾಡಬೇಕು ಎಂದರು.
ಮುನಿರಾಬಾದ್ ಕೆಎಸ್‍ಆರ್‍ಪಿ ತರಬೇತಿ ಶಾ¯ಯಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಇದು ನನ್ನ ಗಮನಕ್ಕೆ ಬಂದಿದೆ. ಪೆÇಲೀಸ್ ವಸತಿ ಗೃಹ ನಿರ್ಮಾಣ ಕೆಲಸ ನqಯುತ್ತಿದೆ. ಹೆಚ್ಚಿನ ಕಟ್ಟಡಗಳ ಅವಶ್ಯಕvಯೂ ಇದೆ. ಈ ಎಲ್ಲಾ ಬೇಡಿPಯನ್ನು ಈಡೇರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೆÇಲೀಸ್ ನಿರ್ದೇಶಕ ಭಾಸ್ಕರರಾವ್, ಶಾಸಕ ರಾಘವೇಂದ್ರ ಹಿತ್ನಾಳ್, ತರಬೇತಿ ಶಾ¯ಯ ಮುಖ್ಯಸ್ಥ ರಾಮಕೃಷ್ಣ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ