ಸುಗಮ ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಂದ `ಪಂಚ’ಸೂತ್ರ!

ಬೆಂಗಳೂರು: ಅತೃಪ್ತರನ್ನು ತೃಪ್ತಿ ಪಡಿಸಲು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಪಂಚಸೂತ್ರಗಳನ್ನು ರೂಪಿಸಿದ್ದಾರೆ.

ದೇವೇಗೌಡರ ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಲು ಹಾಗೂ ಪಕ್ಷ ಸಂಘಟನೆಗೆ ತೃಪ್ತ ಅಸ್ತ್ರ ಅನುಸರಿಸಲು ಮುಂದಾಗಿದ್ದು, ಸಚಿವ ಸ್ಥಾನದಿಂದ ಅಸಮಾಧಾನದಿಂದರುವ ಶಾಸಕರಿಗೆ ಪ್ರಮುಖ, ನಿಗಮ-ಮಂಡಳಿ ಮತ್ತು ಸಿಎಂ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಿ ಸಮಾಧಾನ ಮಾಡಲು ದೇವೇಗೌಡರು ಚಿಂತನೆ ಮಾಡಿದ್ದಾರೆ. ಇದರ ಜೊತೆಗೆ ಪಕ್ಷ ಕೈ ಬಿಟ್ಟಿರುವ ಜಾತಿಗಳ ಕ್ರೂಢೀಕರಣಕ್ಕೂ ದೇವೇಗೌಡರು ಯೋಚಿಸಿದ್ದಾರೆ ಎನ್ನಲಾಗಿದೆ.

ದೇವೇಗೌಡರು ಜಾತಿಗಳ ಪ್ರಮುಖ ನಾಯಕರ ಮೂಲಕ ಜಾತಿಗಳ ಮತ ಕ್ರೂಢೀಕರಣಕ್ಕೆ ನಿರ್ಧಾರ ಮಾಡಿದ್ದು, ಮುಸ್ಲಿಂ, ಲಿಂಗಾಯತ, ಕುರುಬ ಮತ್ತು ದಲಿತ ಮತಗಳನ್ನು ಕ್ರೂಢೀಕರಣ ಮಾಡಲಿದ್ದಾರೆ. ಮಂಗಳವಾರ ನಡೆದ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಲೋಕಸಭಾ ಚುನಾವಣೆಗೆ ದೇವೇಗೌಡರು ರೂಪಿಸಿರುವ ಪಂಚಸೂತ್ರ ಇದಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ