ಕಾಶ್ಮೀರದಲ್ಲಿ ಎಕೆ 47 ಬಂದೂಕು ಸಮೇತ ಪೊಲೀಸ್​ ಅಧಿಕಾರಿ ಕಣ್ಮರೆ!

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಏಕಾಏಕಿ ವಿಶೇಷ ಪೊಲೀಸ್​ ಅಧಿಕಾರಿಯೊಬ್ಬರು ನಾಪತ್ತೆಯಾಗಿದ್ದಾರೆ. ಎಕೆ 47 ಬಂದೂಕು ಸಮೇತ ಅಧಿಕಾರಿ ಕಣ್ಮರೆ ಆಗಿದ್ದಾರೆ.
ಇರ್ಫಾನ್​ ಅಹ್ಮದ್​ ದರ್​ ದಿಢೀರ್​ ನಾಪತ್ತೆಯಾಗಿರುವ ಪೊಲೀಸ್​ ಅಧಿಕಾರಿ. ಪುಲ್ವಾಮ ಜಿಲ್ಲೆಯ ಪಮ್​ಪೋರ್​ನಿಂದ ಪೊಲೀಸ್​ ಠಾಣೆಯಿಂದ ಮಂಗಳವಾರ ದರ್ ಮಿಸ್​ ಆಗಿದ್ದು, ಅವರ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಉಗ್ರರ ವಿರುದ್ಧ ಹೋರಾಟಕ್ಕೆ ದರ್​ ಅವರನ್ನು ತಿಂಗಳ ಪ್ಯಾಕೇಜ್​ ಆಧಾರದ ಮೇಲೆ ವಿಶೇಷ ಪೊಲೀಸ್​ ಅಧಿಕಾರಿಯಾಗಿ ನೇಮಿಸಲಾಗಿತ್ತು.  ಅವರಿಗೆ ಶಸ್ತ್ರಾಸ್ತ್ರ ಬಳಕೆ ಬಗ್ಗೆ ತರಬೇತಿ ಕೂಡ ನೀಡಲಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ