ಬೆಂಗಳೂರು ಜೂನ್ 27: ಸಮಾಜ ಸೇವಕರಾದ ಶ್ರೀ ಚಂದ್ರಕಾಂತ್ರವರನ್ನು ಇಂದು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ಸಂಘಟನೆಯ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ನೇಮಕಗೊಂಡರು.
ಚಂದ್ರಕಾಂತ್ ರವರು ಸಮಾಜ ಸೇವೆಯಲ್ಲಿ ಪರಿಣಿತರಾಗಿದ್ದು, ಸ್ವಚ್ಛ ಭಾರತ ಅಭಿಯಾನ, ಬಡ ವಿದ್ಯಾರ್ಥಿಗಳ ಶಿಕ್ಷಣ ಹಾಗು ಪರಿಸರ ಸಂರಕ್ಷಣೆ ಯಲ್ಲಿ ಹೆಚ್ಚು ಪಾಲ್ಗೊಂಡಿದ್ದರು. ಅವರು ಬಿಜೆಪಿಯ ಐ ಟಿ ಸೆಲ್ ನ ಸ್ಥಾಪಕರಲ್ಲೊಬ್ಬರಾಗಿದ್ದು ಅದರ ಏಳಿಗೆಯಲ್ಲಿ ಅವರ ಮಹತ್ವದ ಪಾತ್ರವಿದೆ.
ಚಂದ್ರಕಾಂತ್ರವರಿಗೆ ಈ ಪ್ರತಿಷ್ಠಿತ ಪದವಿಯು ದೊರಕಿದ್ದು, ಸಮಾಜ ಸೇವೆಯ ಜೊತೆಗೆ ಗ್ರಾಹಕ ಹಕ್ಕುಗಳ ರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ಸಂಘಟನೆಯು (CRO) ಹೊಸದಿಲ್ಲಿಯಲ್ಲಿ ನೋಂದಾಯಿತ ಕಚೇರಿ ಮತ್ತು ಕೋಟಾ (ರಾಜಸ್ಥಾನ್) ದಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಪ್ರಬಲ ಸಾಮಾಜಿಕ ಸಂಘಟನೆಯಾಗಿದೆ. ಗ್ರಾಹಕರು ತಮ್ಮ ಹಕ್ಕುಗಳನ್ನು ರಕ್ಷಿಸುವ ಮೂಲಕ ಮತ್ತು ನ್ಯಾಯ ಒದಗಿಸುವ ಸಲುವಾಗಿ ಹಾಗು ಸಮಾಜದಲ್ಲಿ ತಮ್ಮ ಅಗತ್ಯಗಳನ್ನು ಎತ್ತಿಹಿಡಿಯಲು ವಿವಿಧ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಮೂಲಕ CRO ಕಾರ್ಯನಿರ್ವಹಿಸುತ್ತದೆ.