ಸಿದ್ದರಾಮಯ್ಯ ಹೇಳಿಕೆ ಪರಿಣಾಮಬೀರಲ್ಲ ಸರ್ಕಾರ ಉತ್ತಮ ರೀತಿಯಲ್ಲೇ ನಡೆಯುತ್ತದೆ: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್

 

ಬೆಂಗಳೂರು, ಜೂ.27- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗಳಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಸರ್ಕಾರ ಉತ್ತಮ ರೀತಿಯಲ್ಲೇ ನಡೆಯುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕೆಲ ಶಾಸಕರ ನಡುವಿನ ಮಾತುಕತೆಯನ್ನು ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇದು ಅಧಿಕೃತ ಅಲ್ಲ ಎಂದು ಸ್ಪಷ್ಟಪಡಿಸಿದರು.

ಮೈತ್ರಿ ವಿಚಾರದಲ್ಲಿ ನಾನೂ ಸೇರಿದಂತೆ ಯಾವ ನಾಯಕರೂ ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಕರ್ನಾಟಕ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರ ಹೇಳಿಕೆಗಳೇ ಅಂತಿಮ. ಅದರ ಹೊರತು ಪಕ್ಷ ಹಾಗೂ ಸರ್ಕಾರದ ವಿರುದ್ಧ ಯಾರೇ ಹೇಳಿಕೆ ಕೊಟ್ಟರೂ ಸಹಿಸಲು ಸಾಧ್ಯವಿಲ್ಲ. ಎಷ್ಟೇ ದೊಡ್ಡಮಟ್ಟದ ನಾಯಕರಾಗಿದ್ದರೂ ಇದು ಅನ್ವಯಿಸುತ್ತದೆ ಎಂದು ಸಿದ್ದರಾಮಯ್ಯ ಅವರ ಹೆಸರೇಳದೆ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ವೇ¼ಯಲ್ಲೇ ಐದು ವರ್ಷದ ಸರ್ಕಾರದ ಅವಧಿಗೆ ನಾವು ಸಹಿ ಮಾಡಿಕೊಟ್ಟಿದ್ದೇವೆ. ಇದರ ನಡುವೆ ಯಾರೂ ಅಪಸ್ವರ ತೆUಯಬಾರದು. ಸರ್ಕಾರದ ನಿರ್ಧಾರಗಳ ಬಗ್ಗೆ ರಾಹುಲ್‍ಗಾಂಧಿ ಅವರು ಚರ್ಚಿಸಿದ್ದಾರೆ. ನಾವು ಕೇವಲ 37 ಸ್ಥಾನಗಳನ್ನು ಗಮನದಲ್ಲಿಟ್ಟುಕೊಂಡು ಮಾತನಾಡುತ್ತಿಲ್ಲ. 224 ಕ್ಷೇತ್ರಗಳ ಬಗ್ಗೆಯೂ ನಮಗೆ ಕಾಳಜಿ ಇದೆ ಎಂದರು.

ಮಂಡ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸಾಧ್ಯವಿಲ್ಲ ಎಂದು ಚೆಲುವರಾಯಸ್ವಾಮಿ ಅವರು ಹೇಳಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ. ರಾಜರಾಜೇಶ್ವರಿನಗರ ವಿಧಾನಸಭೆ ಚುನಾವuಯಲ್ಲಿ ದೇವೇಗೌಡರು ಹೇಳಿಕೆಗಳನ್ನು ನೀಡಿದ್ದರು. ಅದರ ಹೊರತಾಗಿಯೂ ಮೈತ್ರಿ ಉತ್ತಮವಾಗಿ ನಡೆದುಕೊಂಡು ಹೋಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ನೌಕರರ ವರ್ಗಾವಣೆ ವಿಷಯದಲ್ಲಿ ಕಾಂಗ್ರೆಸ್ ಶಾಸಕರಿಗೆ ತೊಂದರೆಯಾಗಿಲ್ಲ. ನಾವು ಕೇಳಿದ ಅಧಿಕಾರಿಗಳನ್ನೇ ಎಚ್.ಡಿ.ಕುಮಾರಸ್ವಾಮಿ ಅವರು ವರ್ಗಾವಣೆ ಮಾಡಿಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಅವರು ಬಜೆಟ್ ಮಂಡಿಸುವ ದಿನ ನಾನು ಅಧಿವೇಶನದಲ್ಲಿ ಇರುವುದಿಲ್ಲ. ನೊಣವಿನಕೆರೆ ಮಠದ ಕಾರ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಜು.5ರಂದು ರಾಜ್ಯಪಾಲರು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಇದು ಪೂರ್ವ ನಿಯೋಜಿತ ಕಾರ್ಯಕ್ರಮವಾಗಿರುವುದರಿಂದ ನಾನು ಅದರಲ್ಲಿ ಭಾಗವಹಿಸಬೇಕಾಗಿದೆ. ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವಾಗ ನಾನು ಅಧಿವೇಶನದಲ್ಲಿ ಇರುತ್ತೇನೆ. ಬಜೆಟ್ ದಿನ ಅಧಿವೇಶನಕ್ಕೆ ಬರಲು ಸಾಧ್ಯವಾಗದಿದ್ದರೆ ಯಾರೂ ತಪ್ಪು ತಿಳಿಯುವುದು ಬೇಡ. ಕಾರ್ಯಕ್ರಮ ಮುಗಿದ ಬಳಿಕ ನಾನು ಬರಲು ಪ್ರಯತ್ನಿಸುತ್ತೇನೆ. ಅದು ಸಾಧ್ಯವಾಗದೇ ಇದ್ದರೆ ಊಹಾಪೆÇೀಹದ ಅಭಿಪ್ರಾಯ ಒಳ್ಳೆಯದಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ