ಕೊಳ್ಳೇಗಾಲ, ಜೂ.27- ತಾ.ಪಂ ಸಾಮಾನ್ಯ ಸಭೆಯ ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು ಕುಳಿತುಕೊಳ್ಳಲು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಅವಕಾಶವಿದೆಯೆ ಎಂಬ ವಿಚಾರಕ್ಕೆ ಗೊಂದಲ ಸೃಷ್ಟಿಯಾಗಿದ್ದರಿಂದ ಬಿಜೆಪಿ ಸದಸ್ಯರು ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿ ಕೆಲ ಕಾಲ ಸಭೆಗೆ ಅಡ್ಡಿಪಡಿಸಿದ ಘಟನೆ ಜರುಗಿತು. ಇಂದು ಅಧ್ಯಕ್ಷ ರಾಜು ಅಧ್ಯಕ್ಷvಯಲ್ಲಿ ನಡೆದ ತಾ.ಪಂ ಸಾಮಾನ್ಯ ಸ¨sಯನ್ನು ಕೃಷಿ ಇಲಾಖೆ ಅಧಿಕಾರಿ ವರದಿ ಮಂಡಿಸುವ ವೇಳೆಗೆ ಹಾಜರಾದ ಬಿಜೆಪಿ ಸದಸ್ಯರಲ್ಲಿ ಧನಗೆರೆ ಕ್ಷೇತ್ರದ ಸದಸ್ಯ ಸುರೇಶ್ , ಕಳೆದ ಸ¨sಯಲ್ಲಿ ಚರ್ಚೆ ನಡೆಸಿದ ಎಷ್ಟು ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ. ಎಷ್ಟು ಅಭಿವೃದ್ಧಿ ಮಾಡಿದ್ದೀರಿ. ಮೊದಲು ಚರ್ಚಿಸಿ ನಂತರ ಸಭೆ ನಡೆಸಿ, ಎಂದು ಆಕ್ಷೇಪ ವ್ಯಕ್ತಡಿಸುತ್ತಿದ್ದಂತೆ ಅಧ್ಯಕ್ಷ ರಾಜು ಅನುಪಾಲನ ವರದಿ ಆಧಾರದ ಮೇಲೆ ಚರ್ಚಿಸಲು ಇದುವರೆಗೂ ಯಾವ ಇಲಾSಯ ಅಧಿಕಾರಿಗಳು ಅನುಪಾಲನ ವರದಿ ನೀಡಿಲ್ಲ.
ಆದ್ದರಿಂದ ಎಷ್ಟು ಇಲಾSಯ ಅಧಿಕಾರಿಗಳು ವರದಿ ಕೊಟ್ಟಿಲ್ಲ ? ಯಾಕೆ ಕೊಟ್ಟಿಲ್ಲ ? ಎಂಬ ಕುರಿತು ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದ್ದೆನೆ. ಅಲ್ಲದೆ ಇಲ್ಲಿಗೆ ಇದುವರೆಗೆ ಶಾಶ್ವತ ಇಒ ನೇಮಕವಾಗಿರಲಿಲ್ಲ. ಹಾಗಾಗಿ ಅಭಿವೃದ್ಧಿಗೆ ಅಡೆ ತಡೆಗಳಾಗಿವೆ. ಅದನ್ನು ಒಪ್ಪಿಕೊಳ್ಳುತ್ತೇವೆ ಎನ್ನುತ್ತಿದ್ದಂತೆ ವೇದಿPಯಲ್ಲಿ ಉಪಸ್ಥಿತಿ ಇದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮದ್ ಮಧ್ಯ ಪ್ರವೇಶಿಸಿದರು. ಇದರಿಂದ ಕುಪಿತ ಗೊಂಡ ಸದಸ್ಯ ಸುರೇಶ್ ನಾನು ಸಭಾಧ್ಯಕ್ಷರ ಜೊತೆ ಮಾತನಾಡುತ್ತಿದ್ದೇನೆ ಅವರು ಉತ್ತರ ನೀಡುತ್ತಿದ್ದಾರೆ.
ಮಧ್ಯೆ ಮಾತನಾಡಲು ನೀವ್ಯಾರು ಸ¨sಯ ವೇದಿPಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು ಕುಳಿತು ಕೊಳ್ಳಲು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಅವಕಾಶವಿದೆಯೆ ಎಂಬುದನ್ನು ಮೊದಲು ತಿಳಿದು ಕೊಳ್ಳಿ ಎಂದು ಗರಂ ಆಗುತ್ತಿದ್ದಂತೆ ಗದ್ದಲ ಸೃಷ್ಠಿಯಾಗಿ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ರಾಜು ಟೇಬಲ್ ಬಡಿದು ಗರಂ ಆದರು ನಂತರ ಸಭೆ ನಡೆಸಲು ಮುಂದಾಗುತ್ತಿದ್ದಂತೆ ಅಸಮಧಾನಗೊಂಡ ಸುರೇಶ್ ಕೆಳಗೆ ಕುಳಿತು ಧರಣಿ ನಡೆಸಿದರು. ಸದಸ್ಯರು ಪ್ರತಿಭಟನೆ ಮುಂದುವರೆಸಿ ಪಟ್ಟು ಹಿಡಿದಾಗ ಸ¨sಯ ವೇದಿPಯಲ್ಲಿ ಅಧ್ಯಕ್ಷರು- ಉಪಾಧ್ಯಕ್ಷರು ಹೊರತು ಉಳಿದ ಯಾರಿಗೂ ಅವಕಾಶವಿಲ್ಲ ಆದರೆ ಸದಸ್ಯರ ಅನ್ಯೋನ್ಯತೆಯಿಂದ ಕುಳಿತುಕೊಳ್ಳಬಹುದು ಎಂದು ಇಒ ಉಮೇಶ್ ಸ್ಪಷ್ಟಪಡಿಸುತ್ತಿದ್ದಂತೆ ಧರಣಿ ಕೈ ಬಿಟ್ಟರು.