ಕೈಗಾರಿಕಾ ಟೌನ್‍ಶಿಪ್ ಯೋಜನೆ ಶೀಘ್ರಗತಿಯಲ್ಲಿ ಅನುಷ್ಟಾನಕ್ಕೆ ಮನವಿ

 

ಬೆಂಗಳೂರು, ಜೂ.26-ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ವೈಟ್‍ಫೀಲ್ಡ್ರ್, ಪೀಣ್ಯ, ಮಹದೇವಪುರ ಮತ್ತು ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕಾ ಟೌನ್‍ಶಿಪ್ ಯೋಜನೆಯನ್ನು ಶೀಘ್ರಗತಿಯಲ್ಲಿ ಅನುಷ್ಟಾನಗೊಳಿಸಿದರೆ ಕೈಗಾರಿಕೆಗಳಿಗೆ ಸಹಕಾರಿಯಾಗಲಿದೆ ಎಂದು ಕಾಸಿಯಾ ಅಧ್ಯಕ್ಷ ಹನುಮಂತೇಗೌಡ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದಾರೆ.
ಕಾಸಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೇಷ್ಟತೆ ಮತ್ತು ನಾವೀನ್ಯತೆ ಕೇಂದ್ರ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಅವರನ್ನು ಸನ್ಮಾನಿಸಿ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಎಂಎಸ್‍ಎಂಇ ವಲಯದ ಅಭಿವೃದ್ಧಿಗಾಗಿ ತಾವು ಯೋಜಿಸಿರುವ ಅತ್ಯಂತ ಸಕಾರಾತ್ಮಕ ಉಪಕ್ರಮಗಳಿಗಾಗಿ ಸರ್ಕಾರವನ್ನು ಸಂಸ್ಥೆ ಅಭಿನಂದಿಸುತ್ತದೆ. ಆದರೆ ಕೆಲ ಸಮಸ್ಯೆಗಳನ್ನು ಎಂಎಸ್‍ಎಂಇ ವಲಯ ಸಮಸ್ಯೆಗಳನ್ಛ್ನು ಅನುಭವಿಸುತ್ತಿದ್ದು, ಇವುಗಳನ್ನು ನಿವಾರಿಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರೆ ಅನುಕೂಲವಾಗಲಿದೆ ಎಂದರು.
ವಿದ್ಯುತ್ ಸರಬರಾಜು ಕೊರತೆಯನ್ನು ಬಗೆಹರಿಸುವ ಅಗತ್ಯವಿದೆ ಹಾಗೂ ಹೆಚ್ಚುವರಿ ವಿದ್ಯುತ್ತನ್ನು ಸಹ ಕೈಗಾರಿಕೆಗಳಿಗೆ ಪೂರೈಸುವಂತೆ ಮನವಿ ಮಾಡಲಾಯಿತು. ಕರ ಸಮಾಧಾನ ಯೋಜನೆ ವಿಸ್ತರಣೆ, ಕನಿಷ್ಠ ವೇತನ ಕಾಳಜಿಯ ವಿಷಯ, ಕೈಗಾರಿಕಾ ವಸಾಹತುಗಳಲ್ಲಿನ ಮೂಲಭೂತ ಸೌಕರ್ಯಗಳ ಉನ್ನತೀಕರಣ ಸೇರಿದಂತೆ ಮತ್ತಿತರ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಲಾಯಿತು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಸಣ್ಣ ಕೈಗಾರಿಕೆಗಳಿಂದ ಯುವಜನತೆಗೆ ಉದ್ಯೋಗಗಳು ಲಭಿಸುತ್ತಿವೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಒತ್ತು ನೀಡಲಿದೆ ಎಂದು ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ