
ತುಮಕೂರು, ಜೂ.26- ನಿಂತಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ ಪಟ್ಟಣದ ಚಂಗಾವರ ರಸ್ತೆಯಲ್ಲಿ ನಡೆದಿದೆ.
ಸಂತೇಪೇಟೆಯ ನಿವಾಸಿ ಶ್ರೀನಿವಾಸ್ (20) ಮೃತಪಟ್ಟ ಯುವಕ. ರೇಷ್ಮೆ ಗೂಡನ್ನು ತನ್ನ ದ್ವಿಚಕ್ರ ವಾಹನದಲ್ಲಿ ರಾಮನಗರ ಮಾರುಕಟ್ಟೆಗೆ ಮಾರಲು ಹೊರಟಿದ್ದರು. ಈ ಸಂದರ್ಭದಲ್ಲಿ ಚಂಗಾವರ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ರಭಸಕ್ಕೆ ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಶಿರಾ ನಗರ ಪೆÇಲೀಸ್ ಠಾಣೆಯ ಲಕ್ಷ್ಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.