ಅಪರೂಪದ ಮದುವೆ

ಕೋಲಾರ – ಅಪರೂಪದ ಕುಬ್ಜರ ಮದುವೆಗೆ ಕೋಲಾರ ನಗರಸಾಕ್ಷಿಯಾಗಿದೆ. ಯಶವಂತಪುರದ 28 ವರ್ಷದ ಅನಿಲ್ ಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರದ ವರಲಕ್ಷ್ಮೀ ಅಪರೂಪದ ಕುಬ್ಜ ಜೋಡಿ. 2.5 ಅಡಿ ಎತ್ತರದ ಅನಿಲ್ ಕುಮಾರ್ , 2 ಅಡಿ ಎತ್ತರದ ವರಲಕ್ಷ್ಮಿ ಅವರನ್ನ ವರಿಸಿದ್ದಾರೆ. ಅನಿಲ್ ಕುಮಾರ್ ಬೆಂಗಳೂರಿನ ಖಾಸಗೀ ಕಂಪನಿಯ ಉದ್ಯೋಗಿಯಾಗಿದ್ದಾರೆ. ಈ ಅಪರೂಪತದ ಮದುವೆಯು ಕೋಲಾರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಜಡಗೇನಹಳ್ಳಿ ಪುರಾಣ ಪ್ರಸಿದ್ದ ಕಾಲಭೈರವೇಶ್ವರ ದೇವಾಲಯದಲ್ಲಿ ಮದುವೆ ಶಾಸ್ತ್ರ ನಡೆಯಿತು. ಇತ್ತೀಚೆಗೆ ನಡೆದ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಬಲ ಅಪರೂಪದ ಜೋಡಿಗೆ ಶುಭಾಶಯಗಳ ಸುರಿಮಳೆ ಕೂಡ ಹರಿದು ಬಂದಿತ್ತು. ಮದುವೆಗಳು ಸ್ವರ್ಗ ದಲ್ಲಿ ನಿಶ್ಚಯವಾಗುತ್ತದೆ ಎಂಬುದಕ್ಕೆ ಈ ಅಪರೂಪದ ಮದುವೆ ಸಾಕ್ಷಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ