
ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ ಮುಂದುವರಿದೆ. ಸೆಂಟ್ಲ್ ಮೆಂಟ್ ಸೇರಿದಂತೆ ಹಲವು ಕಡೆಗಳಲ್ಲಿ ಧಿಡೀರ್ ಕಾರ್ಯಚರಣೆ ನಡೆಸುವ ಮೂಲಕ ರೌಡಿ ಶೀಟರ್ ಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಜನ್ಮದಿನದ ಆಚರಣೆ ಹಿನ್ನೆಲೆ ತಲ್ವಾರ್ ನಿಂದ ಕೇಕ್ ಕತ್ತರಿಸುವ ಹೊಸ ಟ್ರೆಂಡ್ ಶುರುವಾಗಿತ್ತು. ಹೀಗಾಗಿ ಹುಬ್ಬಳ್ಳಿ-ಧಾರಾವಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಕಳೆದ ಬಾರಿ ಅಪಾರ ಪ್ರಮಾಣದಲ್ಲಿ ಮಾರಕಾಸ್ತ್ರಗಳು ಕೂಡ ಪತ್ತೆಯಾಗಿತ್ತು. ಇಂದು ಡಿಸಿಪಿ ರೇಣುಕಾ ಸುಕುಮಾರ್ ನೇತೃತ್ವದ ತಂಡದಿಂದ ಮತ್ತರ ಕಾರ್ಯಾಚರಣೆ ನಡೆದಿದೆ.