ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಎಂದಿನಂತೆ ಅಮರನಾಥ ಯಾತ್ರೆಗೆ ಉಗ್ರ ಬೆದರಿಕೆ ಹಿನ್ನೆಲೆಯಲ್ಲಿ ಈ ಬಾರಿ ಸೇನೆ ಯಾತ್ರಿಕರಿಗೆ ಬಿಗಿ ಭದ್ರತೆ ಒದಗಿಸಲು ನಿರ್ಧರಿಸಿದೆ. ಈ ಸಲದ ಅಮರನಾಥ ಯಾತ್ರೆ ಜೂನ್ 28ರಿಂದ ಪ್ರಾರಂಭವಾಗಲಿದೆ.
ವಿಶೇಷ ಎಂದರೆ ಈ ಬಾರಿ ಅಮರನಾಥ ಯಾತ್ರಿಕರ ಭದ್ರತೆಗಾಗಿ ಸಿಆರ್ಪಿಎಫ್ನ ವಿಶೇಷ ಮೋಟಾರ್ ಬೈಕ್ ದಳವನ್ನು ಆಯೋಜನೆ ಮಾಡಲಾಗಿದೆ. ಅಮರನಾಥ ಯಾತ್ರಿಕರು ಪ್ರಯಾಣಿಸುವ ಎಲ್ಲ ವಾಹನಗಳನ್ನು ರೇಡಿಯೋ ಫ್ರೀಕ್ವೆನ್ಸಿ (RF) ಟ್ಯಾಗ್ ಮೂಲಕ ಅತ್ಯಂತ ನಿಕಟ ವಿಚಕ್ಷಣೆಗೆ ಒಳಪಡಿಸಲಾಗುವುದು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಅಮರನಾಥ ಯಾತ್ರೆಯ ಮಾರ್ಗದುದ್ದಕ್ಕೂ ಹೆಚ್ಚುವರಿಯಾಗಿ 22,500 ಅರೆಸೈನಿಕ ಪಡೆ ಸಿಬಂದಿಯನ್ನ ನೇಮಕ ಮಾಡಲಾಗಿದೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.