ಮೈಸೂರು, ಜೂ.25-ಶಾಲಾ ವಾಹನ ಪಲ್ಟಿ ಹೊಡೆದ ಪರಿಣಾಮ ಚಾಲಕ ಹಾಗೂ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ವಿದ್ಯಾಪೀಠದ ಬಳಿ ನಡೆದಿದೆ. ನಂಜನಗೂಡಿನ ಹೆಮ್ಮರದಾಲ ಗ್ರಾಮದ ಬಳಿ ಇರುವ ಎಸ್ಜಿವಿಕೆ ಕಾನ್ವೆಂಟ್ ಶಾಲೆ ವಿದ್ಯಾರ್ಥಿಗಳಿದ್ದ ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಉರುಳಿ ಬಿದ್ದಿದೆ. ತಕ್ಷಣ ಅಲ್ಲಿದ್ದ ಸ್ಥಳೀಯರು ನೆರವಿಗೆ ಬಂದು ಗಾಯಗೊಂಡಿದ್ದ ಮಕ್ಕಳನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಕೆಲ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ವಿಷಯ ತಿಳಿದ ಪೆÇೀಷಕರು ಗಾಬರಿಗೊಂಡು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ.