
ದಾವಣಗೆರೆ,ಜೂ.25- ಕೌಟುಂಬಿಕ ಕಲಹದಿಂದ ನೊಂದು ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಟಿಜೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ನಿಡುವಳ್ಳಿ ಹೊಸ ಬಡಾವಣೆ ನಿವಾಸಿ ರಘು(25) ಆತ್ಮಹತ್ಯೆ ಮಾಡಿಕೊಂಡ ಯುವಕ.
ಟೈಲ್ಸ್ ಕೆಲಸ ಮಾಡುತ್ತಿದ್ದ ರಘು ಕುಡಿದು ಬಂದು ವಿನಾಕಾರಣ ತಾಯಿ ಹಾಗೂ ಸಹೋದರನೊಂದಿಗೆ ಜಗಳವಾಡುತ್ತಿದ್ದನು. ನಿನ್ನೆಯೂ ಸಹ ತಾಯಿಯೊಂದಿಗೆ ಜಗಳವಾಡಿದ ಈತ ತಾಯಿ ಹಾಗೂ ಸಹೋದರನನ್ನು ಹೊರಗೆ ತಳ್ಳಿ ಮನೆ ಬಾಗಿಲು ಹಾಕಿಕೊಂಡು ರೂಮ್ಗೆ ಹೋಗಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೆಟಿಜೆ ನಗರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.