ಪಬ್‍ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರ ವಿರುದ್ಧ ದೂರು

ಮೈಸೂರು,ಜೂ.25- ಪಬ್‍ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರ ವಿರುದ್ಧ ವಿಜಯನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಪಂಚವಟಿ ವೃತ್ತದ ಬಳಿ ಇರುವ ಪಬ್‍ಗೆ ಯುವತಿಯೊಬ್ಬಳು ತೆರಳಿದ್ದಾಳೆ. ಈ ವೇಳೆ ಉಮೇಶ್ ಕುಮಾರ್ ಹಾಗೂ ವಿವೇಕ್ ಎಂಬುವರು ಅಸಭ್ಯವಾಗಿ ವರ್ತಿಸಿ ಅಶ್ಲೀಲವಾಗಿ ನಿಂದಿಸಿದ್ದಾರೆ. ಈ ಬಗ್ಗೆ ಯುವತಿ ವಿಜಯನಗರ ಠಾಣೆಗೆ ದೂರು ನೀಡಿದ್ದು , ಆರೋಪಿಗಳ ಬಂಧನಕ್ಕಾಗಿ ಪೆÇಲೀಸರು ಬಲೆ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ