ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

Execution Sling Hanging Hangman Knot Penalty Rope

ಹಾಸನ, ಜೂ.25-ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಹಾಸ್ಟೇಲ್‍ನ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಾಲ್ಲೂಕಿನ ಮಲ್ಲದೇವರಪುರ ಗ್ರಾಮದ 16 ವರ್ಷದ ವಿದ್ಯಾರ್ಥಿನಿಯ ಶವ ಸರ್ಕಾರಿ ಮೆಟ್ರಿಕ್ ಪೂರ್ವ ಹಾಸ್ಟೇಲ್‍ನಲ್ಲಿ ಪತ್ತೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಹಾಸ್ಟೇಲ್‍ನಲ್ಲೇ ಇದ್ದುಕೊಂಡು ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಈಕೆ ಜೂ.19ರಿಂದ ನಾಪತ್ತೆಯಾಗಿದ್ದಳು.
ಜೂ.16ರಂದು ನಾಲ್ವರು ಯುವಕರು ಇದೇ ಹಾಸ್ಟೇಲ್‍ನ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಮತ್ತೊಂದು ಹಾಸ್ಟೇಲ್‍ನ ಒಬ್ಬ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಪ್ರವಾಸಕ್ಕೆಂದು ಮೈಸೂರಿಗೆ ಕರೆದೊಯ್ದಿದ್ದ ಆರೋಪ ಕೇಳಿಬಂದಿತ್ತು. ಜೂ.17ರಂದು ಇಬ್ಬರು ವಿದ್ಯಾರ್ಥಿನಿಯರು ವಾಪಸ್ ಬಂದಿದ್ದಾರೆ. ಆದರೆ, ಈ ವಿದ್ಯಾರ್ಥಿನಿ ಮಾತ್ರ 18ರಂದು ಹಾಸ್ಟೇಲ್‍ಗೆ ಬಂದು ಬಳಿಕ ನಾಪತ್ತೆಯಾಗಿದ್ದಳು. ಪೆÇೀಷಕರಿಗೆ ಈ ವಿಷಯ ತಿಳಿದು ಪೆÇಲೀಸರಿಗೆ ದೂರು ನೀಡಿದ್ದರು. ನಿನ್ನೆ ಹಾಸ್ಟೇಲ್ ಮೇಲ್ಭಾಗದ ಕೊಠಡಿಯೊಂದರಲ್ಲಿ ಕೆಟ್ಟ ವಾಸನೆ ಬರುತ್ತಿರುವುದನ್ನು ವಿದ್ಯಾರ್ಥಿಗಳು ಗಮನಿಸಿ ಹಾಸ್ಟೇಲ್‍ನವರಿಗೆ ತಿಳಿಸಿದ್ದಾರೆ.
ಹಾಸ್ಟೇಲ್‍ನವರು ಮೇಲೆ ಹೋಗಿ ನೋಡಿದಾಗ ಸ್ಟೋರ್‍ರೂಂನಲ್ಲಿ ಈ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತ ದೇಹ ಭಾಗಶಃ ಕೊಳೆತಿತ್ತು. ವಿದ್ಯಾರ್ಥಿನಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲು ಮಾಡುಕೊಂಡಿದ್ದ ಹಾಸನ ಮಹಿಳಾ ಠಾಣೆ ಪೆÇಲೀಸರು ಈಕೆಯನ್ನು ಮೈಸೂರಿಗೆ ಕರೆದೊಯ್ದಿದ್ದ ಆರೋಪದ ಮೇಲೆ ಪೆÇೀಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನಾಲ್ವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೆ.ಆರ್.ನಗರದ ಯುವಕ, ಚಾಮರಾಜನಗರದ ಮತ್ತೊಬ್ಬ ಯುವಕ ಹಾಗೂ ಹಾಸನದ ಇಬ್ಬರು ಯುವಕರು ಹಾಸ್ಟೇಲ್‍ನ ಮೂವರು ವಿದ್ಯಾರ್ಥಿನಿಯರನ್ನು ಕರೆದೊಯ್ದಿದ್ದರು ಎನ್ನಲಾಗಿದ್ದು, ಒಂದು ದಿನ ಮೈಸೂರಿನಲ್ಲೇ ತಂಗಿ ಮರುದಿನ ಇಬ್ಬರು ವಿದ್ಯಾರ್ಥಿನಿಯರನ್ನು ಕರೆತಂದು ಹಾಸ್ಟೇಲ್‍ಗೆ ಬಿಟ್ಟು ಹೋಗಿದ್ದರು. ಈ ವಿಷಯ ಹಾಸ್ಟೇಲ್ ವಾರ್ಡ್‍ನವರಿಗೆ ತಿಳಿದರೆ ಕಷ್ಟ ಎಂದು ಈ ವಿದ್ಯಾರ್ಥಿನಿ ಮಾತ್ರ ಜೂ.17ರಂದು ಬಾರದೆ ಮರು ದಿನ 18ರಂದು ಬೆಳಗ್ಗೆ ಹಾಸ್ಟೇಲ್‍ಗೆ ಬಂದಿದ್ದಾಳೆ.
ಅಂದೇ ಶಾಲೆಗೆ ಹೋಗುವುದಾಗಿ ಹೇಳಿ ಹೋದ ಈಕೆ ಪತ್ತೆಯಾಗಿರಲಿಲ್ಲ. ಇದೀಗ ಹಾಸ್ಟೇಲ್‍ನಲ್ಲಿಯೇ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಶಾಲಾ ಸಮವಸ್ತ್ರದಲ್ಲಿಯೇ ಹಾಸ್ಟೇಲ್‍ನ ಮೇಲಿನ ಕೊಠಡಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೋ ಅಥವಾ ಬೇರೆನಾದರು ಆಗಿದೆಯೇ ಎಂಬ ಬಗ್ಗೆ ಅನುಮಾನ ಮೂಡಿದೆ.
ಸುದ್ದಿ ತಿಳಿದ ಎಸ್‍ಪಿ ರಾಹುಲ್‍ಕುಮಾರ್ ಹಾಸ್ಟೇಲ್‍ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಾಸ್ಟೇಲ್ ಸಿಬ್ಬಂದಿಗಳ ಬೇಜವಾಬ್ದಾರಿಯಿಂದಲೇ ಘಟನೆ ನಡೆದಿರುವ ಆರೋಪ ಕೇಳಿ ಬಂದಿದ್ದು, ಇನ್ನಿಬ್ಬರು ವಿದ್ಯಾರ್ಥಿನಿಯರು ಊರಿಗೆ ಹೋಗುವುದಾಗಿ ಬರೆದುಕೊಟ್ಟಿರುವ ಪತ್ರದಲ್ಲಿನ ದಿನಾಂಕವನ್ನು ತಿದ್ದಲಾಗಿದ್ದು, ಇಬ್ಬರು ವಿದ್ಯಾರ್ಥಿನಿಯರ ಸಹಿ ಒಂದೇ ರೀತಿ ಇರುವುದು ಕೂಡ ಸಾಕಷ್ಟು ಅನುಮಾನ ಹುಟ್ಟಿದೆ.
ಇನ್ನು ವಿದ್ಯಾರ್ಥಿನಿಯರು ಮೈಸೂರಿಗೆ ಹೋದಾಗ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಈ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ಸಹ ವ್ಯಕ್ತವಾಗಿದೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೆÇಲೀಸರು ತನಿಖೆ ಕೈಗೊಂಡಿದ್ದು, ವಿದ್ಯಾರ್ಥಿನಿಯರನ್ನು ಕರೆದೊಯ್ದಿದ್ದು ಯಾರು? ಏತಕ್ಕಾಗಿ ಕರೆದೊಯ್ಯಲಾಗಿತ್ತು ? ಇದರ ಹಿಂದೆ ಯಾರ್ಯಾರು ಇದ್ದಾರೆ ಎಂಬ ಬಗ್ಗೆ ತನಿಖೆಯಿಂದ ಸತ್ಯ ಹೊರ ಬರಬೇಕಾಗಿದೆ. ಸಮಾಜ ಕಲ್ಯಾಣ ಅಧಿಕಾರಿ ಶ್ರೀಧರ್ ಅವರು ಹಾಸ್ಟೇಲ್ ವಾರ್ಡನ್ ಸರೋಜಾ ಅವರನ್ನು ಅಮಾನತು ಮಾಡಿದ್ದಾರೆ. ಅಮಾನತಿಗೂ ಮುನ್ನವೇ ಸರೋಜಾ ತಲೆ ಮರೆಸಿಕೊಂಡಿದ್ದು, ಈಕೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ವಿದ್ಯಾರ್ಥಿನಿಯರು ಬರೆದುಕೊಟ್ಟಿರುವ ರಜೆ ಪತ್ರವನ್ನು ದೂರಿನಲ್ಲಿ ತಿಳಿಸಿಲ್ಲ. ಅಲ್ಲದೆ, ರಜೆ ಪತ್ರದ ದಿನಾಂಕವನ್ನು ಕೂಡ ತಿದ್ದಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ನಡುವೆ ವಾರ್ಡನ್ ನಾಪತ್ತೆಯಾಗಿರುವುದು ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ.
ಪೆÇೀಷಕರ ಆಕ್ರಂದನ:
ಕೊಳೆತ ಹಾಗೂ ನೇಣುಬಿಗಿದ ಸ್ಥಿತಿಯಲ್ಲಿ ಮಗಳನ್ನು ನೋಡಿದ ಪೆÇೀಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಕೂಲಿನಾಲಿ ಮಾಡಿ ಮಗಳನ್ನು ಹಾಸ್ಟೇಲ್‍ಗೆ ಸೇರಿಸಿ ಓದಿಸುತ್ತಿದ್ದೆವು. ಹಾಸ್ಟೇಲ್ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಮಗಳನ್ನು ಕಳೆದುಕೊಳ್ಳುವಂತಾಯಿತು ಎಂದು ಪೆÇೀಷಕರು ರೋಧಿಸುತ್ತಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ