ಹುಬ್ಬಳ್ಳಿ:ಜೂ-೨೪: ಕಾವೇರಿ ನೀರು ನಿರ್ವಹಣೆ ರಚನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಏಕಮುಖವಾಗಿ ನಿರ್ಣಯ ಕೈಗೊಂಡಿದೆ.
ಪಕ್ಕದ ರಾಜ್ಯದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಈ ನಿರ್ಣಯ ಕೈಗೊಂಡಿದೆ ಎಂದು ಸಚಿವ ಡಿ ಕೆ ಶಿವಕುಮಾರ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ನಿರ್ಣಯ ಕೈಗೊಳ್ಳುವ ಮುನ್ನ ಅದು ಪಾರ್ಲಿಮೆಂಟ್ ನಲ್ಲಿ ಚರ್ಚೆಯಾಗಬೇಕು. ನಮ್ಮ ಬಳಿ ಯಾವುದೇ ಚರ್ಚೆ ಮಾಡದ ಕೇಂದ್ರ ಸರ್ಕಾರ ಈ ನಿರ್ಣಯ ಕೈಗೊಂಡಿದೆ. ಕೇಂದ್ರ ಸರ್ಕಾರ ಈ ನಡೆಯ ಹಿಂದೆ ರಾಜಕೀಯ ಇದೆ. ಈ ಹಿಂದೆ ನಾವು ಕೇಂದ್ರದ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದ್ದೇವೆ. ಆದ್ರೆ ನಮ್ಮ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. ನ್ಯಾಯಾಲಯಕ್ಕೆ ಗೌರವ ನೀಡುತ್ತೇವೆ. ಅದಕ್ಕೆ ನಾವು ಬದ್ದರಾಗಿದ್ದೇವೆ. ಸುಪ್ರೀಂಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ. ರಾಜ್ಯದ ರೈತರ ಹಿತಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ. ನಾವು ಏನು ಮಾಡಬೇಕು ಅಂತಾ ಮುಂದೆ ತಿಳಿಸುತ್ತೇವೆ ಎಂದರು.
ನಮ್ಮ ಬಳಿಯೂ ಡೈರಿಗಳಿವೆ ಎಂಬ ಬಿ ಎಸ್ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ಆಲ್ ದಿ ಬೆಸ್ಟ್ . ಗಾಡ್ ಬ್ಲೆಸ್ ಹಿಮ್ ಎಂದು ಹೇಳುವ ಮೂಲಕ ತಿರುಗೆಟು ನೀಡಿದರು.
Cauvery water,D K shivakumar,PM Modi government