ಹೈದರಾಬಾದ್: ತೆಲಂಗಾಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಾಧಕರೊಬ್ಬರಿದ್ದಾರೆ. ದೇವರ ಕೋಣೆಯಲ್ಲಿ ಡೊನಾಲ್ಡ್ ಟ್ರಂಪ್ ಫೊಟೋ ಇಟ್ಟು, ನಿತ್ಯವೂ ದೇವರಿಗೆ ಸಲ್ಲಿಸುವಂತೆ ಪೂಜೆ-ಪುನಃಸ್ಕಾರಗಳನ್ನು ಸಲ್ಲಿಸಲಾಗುತ್ತಿದೆ.
ಹೌದು, ಜಾನ್ಗಾಂವ್ ಜಿಲ್ಲೆಯ ಪುಟ್ಟ ಗ್ರಾಮ ಕೊನ್ನೆ ನಿವಾಸಿ, 31 ವರ್ಷದ ಬುಸ್ಸಾ ಕೃಷ್ಣ, ದಿನ ನಿತ್ಯ ಡೊನಾಲ್ಡ್ ಟ್ರಂಪ್ ಆರಾಧನೆಯಲ್ಲಿ ತೊಡಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ಕಳೆದ ವರ್ಷ ಅಮೆರಿಕದಲ್ಲಿ ಜನಾಂಗೀಯ ದ್ವೇಷಕ್ಕೆ ಬಲಿಯಾದ ಶ್ರೀನಿವಾಸ್ ಕುಚಿಬೋಟ್ಲಾ ಪ್ರಕರಣ
ಟ್ರಂಪ್ ಆರಾಧನೆ ಯಾಕೆ?
ಶ್ರೀನಿವಾಸ್ ಕುಚಿಬೋಟ್ಲಾ ಹತ್ಯೆಯಿಂದ ತೀವ್ರವಾಗಿ ನೊಂದಿದ್ದ ಕೃಷ್ಣ, ಮುಂದೆ ಇಂತಹ ಘಟನೆ ಮರುಕಳಿಸಬಾರದೆಂಬ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಆರಾಧನೆ ಮಾಡುತ್ತಿದ್ದಾರೆ. ಅಮೆರಿಕದಲ್ಲಿನ ಭಾರತೀಯರ ರಕ್ಷಣೆಗಾಗಿ ಕೃಷ್ಣ ಈ ರೀತಿ ಮಾಡುತ್ತಿದ್ದಾರೆ. ಅವರಿಂದ ಮಾತ್ರ ಭಾರತೀಯರಿಗೆ ರಕ್ಷಣೆ ನೀಡಲು ಸಾಧ್ಯೆ ಎನ್ನುವುದು ಬುಸ್ಸಾ ನಂಬಿಕೆಯಂತೆ.
ವಿಶ್ವದ ಶಕ್ತಿಶಾಲಿ ರಾಷ್ಟ್ರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋಗೆ ಪೂಜೆ ಮಾಡಲು ಆರಂಭಿಸಿದ್ದು, ಅಮೆರಿಕದಲ್ಲಿ ಭಾರತೀಯರಿಗೆ ರಕ್ಷಣೆ ನೀಡು ಶಕ್ತಿ ಇರುವುದು ಟ್ರಂಪ್ ಅವರಿಗೆ ಮಾತ್ರ ಎಂಬ ದೃಢ ನಂಬಿಕೆ ಕೃಷ್ಣ ಹೊಂದಿದ್ದಾರೆ. ಇದೇ ಕಾರಣದಿಂದ ಮನೆಯಲ್ಲಿ ದೇವರಗಳ ಫೋಟೋಗಳ ಜೊತೆಗೆ ಟ್ರಂಪ್ ಫೋಟೋವನ್ನೂ ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ.
ಒಂದಲ್ಲ ಒಂದು ದಿನ ತನ್ನ ಪೂಜೆ ಫಲ ಕೊಡುತ್ತದೆ ಎಂದು ನಂಬಿರುವ ಕೃಷ್ಣ, ಈಗಾಗಲೇ ಫೇಸ್‌ಬುಕ್ ಮೂಲಕ ಟ್ರಂಪ್‌ರಿಂದ ನನಗೆ ಸಂದೇಶ ಬಂದಿದೆ. ಮುಂದಿನ ಭಾರತ ಭೇಟಿ ವೇಳೆ ನನ್ನನ್ನು ನೆನಪಿಸಿಕೊಳ್ಳುವುದು ಖಂಡಿತ ಎಂದು ಕೃಷ್ಣ ವಿಶ್ವಾಸ ವ್ಯಕ್ತಪಡಿಸುತ್ತಾರೆ.