
ಹವಾನ(ಕ್ಯೂಬಾ), ಜೂ.22-ದ್ವೀಪರಾಷ್ಟ್ರ ಕ್ಯೂಬಾ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ರಾಜಧಾನಿ ಹವಾನದಲ್ಲಿನ ಸ್ಯಾಂಟಿಯಾಗೋ ಡಿ ಕ್ಯೂಬಾದಲ್ಲಿ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ದಿವಂಗತ ನಾಯಕನ ಗುಣಗಾನ ಮಾಡಿದ ರಾಷ್ಟ್ರಪತಿ, ಕ್ಯಾಸ್ಟ್ರೋ ಅವರು ಭಾರತದ ಮಹಾ ಗೆಳೆಯರಾಗಿದ್ದರು. ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಶಕ್ತಿಯ ಧ್ವನಿಯಾಗಿದ್ದರು ಎಂದು ಬಣ್ಣಿಸಿದರು. ಗ್ರೀಸ್, ಸುರಿನಾಮ್ ಮತ್ತು ಕ್ಯೂಬಾ ಈ ಮೂರು ದೇಶಗಳ ಪ್ರವಾಸ ಕೊನೆ ಹಂತವಾಗಿ ನಿನ್ನೆ ಸಂಜೆ ಹವಾನಾಗೆ ಆಗಮಿಸಿದ ಕೋವಿಂದ್ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.