ಫಿಫಾ ವಿಶ್ವಕಪ್-2018ರ ಪಂದ್ಯಾವಳಿ ಕುತೂಹಲಕಾರಿ ಘಟ್ಟ ತಲುಪಿದೆ

ಮಾಸ್ಕೊ, ಜೂ.22-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್-2018ರ ಪಂದ್ಯಾವಳಿ ಕುತೂಹಲಕಾರಿ ಘಟ್ಟ ತಲುಪಿದೆ. ಇದೇ ವೇಳೆ ಬರ್ಗರ್ ಸಂಸ್ಥೆಯೊಂದು ರಷ್ಯನ್ ಯುವತಿಯರಿಗೆ ನೀಡಿದ ಆಫರ್ ಈಗ ತೀವ್ರ ವಿವಾದಕ್ಕೆ ಸಿಲುಕಿದೆ. ವಿಶ್ವ ಕಪ್ ಫುಟ್ಬಾಲ್ ಆಟಗಾರರಿಂದ ಗರ್ಭಿಣಿಯಾಗುವ ಯುವತಿ ಅಥವಾ ಮಹಿಳೆಯರಿಗೆ ಜೀವಿತಾವಧಿಗೆ ಉಚಿತ ಬರ್ಗರ್ ನೀಡುವುದಾಗಿ ಘೋಷಿಸಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಸಿಲುಕಿದೆ.
ಅಂತಾರಾಷ್ಟ್ರೀಯ ಬರ್ಗರ್ ತಯಾರಿಕಾ ಸಂಸ್ಥೆ-ಬರ್ಗರ್ ಕಿಂಗ್ ನೀಡಿರುವ ಈ ಆಫರ್ ಬಗ್ಗೆ ರಷ್ಯನ್ ಮಹಿಳೆಯರು ಕುಪಿತಗೊಂಡಿದ್ದಾರೆ. ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಕ್ರೀಡಾಭಿಮಾನಿಗಳಿಗೆ ಅನೇಕ ಸಂಸ್ಥೆಗಳು ವಿವಿಧ ಆಫರ್‍ಗಳನ್ನು ನೀಡುತ್ತಿದೆ. ಆದರೆ ಈ ಸಂಸ್ಥೆ ಅತಿರೇಕದ ಆಫರ್‍ಗೆ ವ್ಯಾಪಕ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ