ಮಳೆಗಾಲದಲ್ಲಿ ಬಾಣಂತಿಯ ಹಾರೈಕೆಯ ರೀತಿ ನೀತಿ

ವರ್ಷಋತು ಎಂದರೆ ಮಳೆಗಾಲ. ಬೆಸಿಗೆ ಗಾಲದಲ್ಲಿ ಬಾಣಂತಿಯ ಹಾರೈಕೆ ಸುಲಭ. ಆದರೆ ಅದೆ ಮಳೆಗಾಲದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಬಾಣಂತಿಯ ಹಾರೈಕೆ ಬಹಳ ಕಷ್ಟಕರ. ಹಾಗಾಗಿ ಈ ವರ್ಷ ಋತುವಿನಲ್ಲಿ ಆಗಷ್ಟೇ ಹೆರಿಗೆಯಾಗಿರುವ ಸ್ರ್ತೀಯರು ಪಾಲಿಸಬೇಕಾದ ಕೆಲವು ಅಂಶಗಳು ಹೀಗಿದೆ.

ಮಳೆಗಾಲದಲ್ಲಿ ಮಳೆಯಿಂದಾಗಿ ಕುಡಿಯುವ ನೀರು ಹೆಚ್ಚು ಕಲುಶಿತಗೂಂಡಿರುವ ಕಾರಣದಿಂದ ನೀರಿನಿಂದ ಹರಡುವ ಹಲವಾರು ಕಾಯಿಲೆಗಳಾದ ವಾಂತಿ, ಬೇದಿ, ಜ್ವರ, ತಲೆನೋವು, ತಲೆಬಾರ ಹೆಚ್ಚು ಕಾಣಿಸಿಕೂಳ್ಳುವ ಕಾರಣದಿಂದ ಮಳೆಗಾಲದಲ್ಲಿ ಕುಡಿಯುವ ನೀರನ್ನು ಶೇಖರಿಸಿ, ಅದನ್ನು ಕುದಿಸಿ 3/4 ಪ್ರಮಾಣಕ್ಕೆ ತಂದಿರಿಸಿ, ತದನಂತರ ಪ್ರಸೂತ ಸ್ತ್ರೀಯರಿಗೆ ಕೂಡುವುದು ಉತ್ತಮ. ಇದರಿಂದ ತಾಯಿ ಮತ್ತು ನಮಜಾತ ಶಿಶುವನ್ನು ಮಳೆಕಾಲದಲ್ಲಿ ಉಂಟಾಗುವ ಕಾಯಿಲೆಯಿಂದ ರಕ್ಷಣೆ ಸಿಗುತ್ತದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಎಲ್ಲರಲ್ಲೂ ಜಾಠರಾಗ್ನಿಯು ಮಂದವಾಗಿರುತ್ತದೆ, ಅದರಲ್ಲೂ ಆಗಷ್ಟೆ ಶಿಶುವುಗೆ ಜನ್ಮ ನೀಡಿರುವ ಪ್ರಸೂತ ಸ್ತ್ರೀಯರಲ್ಲಿ ಜಾಠರಾಗ್ನಿಯು ಇನ್ನೂ ಹೆಚ್ಚು ಮಂದವಾಗಿರುತ್ತದೆ. ಊಟ, ತಿಂಡಿಯು ಬಿಸಿಬಿಸಿ ಯಾಗಿರಬೇಕು, ಕುಡಿಯುವ ನೀರು ಸಹ ಬಿಸಿಯಾಗಿರಬೇಕು ಇದರಿಂದ ಜೀರ್ಣ ಕ್ರಿಯೆಯು ಸುಲಭವಾಗುತ್ತದೆ.

ಹಾಗಾದರೆ ಬಾಣಂತಿಯರಿಗೆ ಏನು ಕೊಡಬೇಕು?

ಹೂಸ ಅಕ್ಕಿಯನ್ನು ಬಾಣಂತಿಯರಿಗೆ ಸೇವಿಸಲು ಕೂಡಬಾರದು ಇದರಿಂದ ತಾಯಿ ಮತ್ತು ಮಗುವುಗೆ ಹೂಟ್ಟೆ ಉಬ್ಬರಿಕೆ ಸಂಭವಿಸುತ್ತದೆ. ಆದುದರಿಂದ ಹಳೆ ಅಕ್ಕಿಯಲ್ಲಿ ಅನ್ನತಯಾರಿಸಿ ಅದಕ್ಕೆ ತುಪ್ಪಾ, ಶುಂಠಿ, ಕಾಳು ಮೆಣಸು, ಉಪ್ಪು ಸೇರಿಸಿ ಸೇವಿಸಲು ಕೂಡುವುದು ಉತ್ತಮ.

ಬಾಣಂತಿಯರಿಗೆ ವರ್ಷಋತುವಿನಲ್ಲಿ ಕ್ಷೀರ ಬಲಾ ತೈಲ, ನಾರಾಯಣ ತೈಲದಲ್ಲಿ ಅಭ್ಯಂಗಮಾಡಿಸಿ, ಬಿಸಿನೀರಿನಲ್ಲಿ ಸ್ನಾನ ಮಾಡಿಸಸುವುದರಿಂದ ಕೈ, ಕಾಲಿನಲ್ಲಿ ಉಂಟಾಗುವ ವಾತ ವಿಕಾರಗಳನ್ನು ತಡೆಗಟ್ಟಬಹುದು.

ವರ್ಷಋತುವುನಲ್ಲಿ ಬಾಣಂತಿಯರಿಗೆ ದಿನದಲ್ಲಿ 1 ಭಾರಿ, 1 ಲೋಟ ಬಿಸಿ ಹಾಲಿಗೆ 1/4 ಚಮಚ ಜಜ್ಜಿರುವ ಶಂಠಿ, 1/2 ಚಮಚ ಶತಾವರಿ ಚೂರ್ಣ, 1/2 ಚಮಚ ಬೆಲ್ಲ ಹಾಕಿ ಸೇವಿಸಲು ಕೂಡಬೇಕ. ಇದರಿಂದ ತಾಯಿಯ ಎದೆಹಾಲು ಹೆಚ್ಚುತ್ತದೆ.

ಬಾಣಂತಿಯು ಪ್ರತಿನಿತ್ಯ ಬೆಳಿಗೆ ಹಾಗು ರಾತ್ರಿ ಆಹಾರ ಸೇವನೆಯ ನಂತರ 5 ಎಮ್.ಎಲ್ ದಶಮೂಲಾರಿಷ್ಟವನ್ನು 10 ಎಮ್.ಎಲ್ ನೀರನಲ್ಲಿ ಮಿಶ್ರಿಸಿ ಸೇವಿಸುವುದರಿಂದ ತಾಯಿಯ ರೋಗ ನಿರೋದಕ ಶಕ್ತಿಯು ವೃಧ್ದಿಸುತ್ತದೆ.

1/2 ಚಮಚ ಜೀರಿಗೆ, 1/4 ಚಮಚ ಜೇಷ್ಟಿ ಮಧು, 1 ಚಿಟಕಿ ಶುಂಠಿ, 1 ಚಿಟಕಿ ಹರಿಶಿಣವನ್ನು 1 ಲೀ ನೀರಿನಲ್ಲಿ ಚೆನ್ನಾಗಿ ಕುದಿಸಿ ಶೋದಿಸಿ ಬಿಸಿಯಾಗಿದ್ದಾಗಲೆ ಬಾಣಂತಿಯರಲ್ಲಿ ಹಾಲು ಹೆಚ್ಚು ಉತ್ಪತಿಯಾಗಲು ಅನುಕೂಲಕಾರಿ.

ಪ್ರಸೂತ ಸ್ತ್ರೀಯರು ಬೆಚ್ಚಗಿರುವ ಉಡಪು, ಕಿವಿಗೆ ಹತ್ತಿ ಹಾಗು ಕಾಲಿಗೆ ಕಾಲುಚೀಲವನ್ನು ದರಿಸುವುದು ಅತ್ಯಾವಶ್ಯಕ. ಇದರಿಂದ ಶರೀರವು ಇಗಾಗಲೇ ಪ್ರಸೂತ ಸಮಯದಲ್ಲಿ ರಕ್ತವನ್ನು ಕಳೆದುಕೂಂಡಿರುವ ಕಾರಣದಿಂದ ಅವರು ಪಾಂಡು ರೋಗ/ಅನೀಮಿಯದಿಂದ ಬಳಲುತ್ತಿರುತ್ತಾರೆ, ಇಂತ ಸಮಯದಲ್ಲಿ ಶರೀರಕ್ಕೆ ಹೆಚ್ಚು ತಂಡಿಯಾದಲ್ಲಿ ಮುಂದೆ ಅವರಿಗೆ ಸಂಧಿವಾತ, ಆಮವಾತ ಬರುವ ಸಧ್ಯತೆ ಇರುತ್ತದೆ. ಆದುದರಿಂದ ಎಚ್ಚರಿಕೆಯಲ್ಲಿರುವುದು ಉತ್ತಮ.

 

– ಡಾ.ಸಿಂಧು ಪ್ರಶಾಂತ್
ದೂರವಾಣಿ-9743857575

ಲೇಖಕರ ಬಗ್ಗೆ

ಡಾ. ಸಿಂಧು ಪ್ರಶಾಂತ್ ರವರು ತಮ್ಮ ಆಯುರ್ವೇದ ಪದವಿಯನ್ನು ಹೊಂದಿದ್ದು ಜೊತೆಗೆ ಎಮ್.ಡಿ (ಆಲ್ಟರ್ನೇಟಿವ್ ಮೆಡಿಸನ್) ಮತ್ತು ಎಮ್.ಎಸ್ಸಿ(ಯೋಗ) ಪದವಿಯನ್ನು ಪಡೆದಿದ್ದಾರೆ.

ಅವರು ಗರ್ಭಿಣಿಯರೆಗೆ ಯೋಗದ ಮಹತ್ವ ಹಾಗು ಹೇಗೆ ಯೋಗವನ್ನು ಮಾಡಬೇಕೆಂದು ತರಬೇತಿಯನ್ನು ಸ್ಕೈಪ್ ಮುಕಾ0ತರ ಹಲವಾರು ಸ್ತ್ರೀಯರಿಗೆ ಹೇಳಿಕೂಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಗರ್ಭಿಣಿಯರಿಗಾಗಿ ಯೋಗ ಹಾಗು ಪ್ರಾಣಾಯಾಮವನ್ನು ಕುರಿತು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಡಾ.ಸಿಂಧು ಪ್ರಶಾಂತ್ ರವರು ಬಹುಮುಖ ಪ್ರತಿಭಾವಂತರು.”ನೃತ್ಯ ಪ್ರಾರ್ಥನ ” ಎಂಬ ಸಂಸ್ಥೆಯ ಸ್ಥಾಪಕಿ ಹಾಗು ಶಕ್ಷಕಿಯಾಗಿ ಹಲವಾರು ಶಿಶ್ಯವೃಂದವನ್ನು ತಯಾರಿಸುತಿರುವ ಹೇಗಳಿಕೇ ಇವರದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ